ಗ್ಲೋಬಲ್ ಹೆಲ್ತ್ ಲೀಡರ್ಗಳು ಹೈದರಾಬಾದ್ನಲ್ಲಿ: ಐಎಚ್ಡಿ 2026ರ ಮುಖ್ಯಾಂಶಗಳು
ಹೈದರಾಬಾದ್, ಜನವರಿ 9: ಇದೇ ತಿಂಗಳ ಕೊನೆಯ ಎರಡು ದಿನಗಳಂದು ಅಂತಾರಾಷ್ಟ್ರೀಯ ಆರೋಗ್ಯ ಸಂವಾದ ಕಾರ್ಯಕ್ರಮ ನಡೆಯಲಿದೆ. ಅಪೋಲೋ ಹಾಸ್ಪಿಟಲ್ಸ್ ಆಯೋಜಿಸುತ್ತಿರುವ ಇಂಟರ್ನ್ಯಾಷನಲ್ ಹೆಲ್ತ್ ಡೈಲೋಗ್ನ 13ನೇ ಆವೃತ್ತಿ (IHD- International Health Dialogue) ಜನವರಿ 30-31ರಂದು ನಡೆಯಲಿದೆ. ಹೈದರಾಬಾದ್ನಲ್ಲಿ ನಡೆಯುವ 2026ರ ಆವೃತ್ತಿಯ ಈ ಕಾರ್ಯಕ್ರಮದ ಥೀಮ್ ‘ಗ್ಲೋಬಲ್ ವಾಯ್ಸಸ್, ಒನ್ ವಿಶನ್’ (ಜಾಗತಿಕ ಧ್ವನಿಗಳು, ಒಂದೇ ದೃಷ್ಟಿ). ಜಾಗತಿಕ ಹೊರಹೊಮ್ಮುವ ಹೊಸ ಐಡಿಯಾಗಳು, ಇನ್ನೋವೇಶನ್ಗಳು ಮತ್ತು ನಾಯಕತ್ವವನ್ನು ಒಂದು ಸಾಮಾನ್ಯ ಗುರಿಯತ್ತ ಕೊಂಡೊಯ್ಯುವ ಮೂಲಕ ಪ್ರಬಲವಾದ ಹೆಲ್ತ್ಕೇರ್ ಸಿಸ್ಟಂಗಳನ್ನು ರೂಪಿಸುವ ಮಾರ್ಗಗಳನ್ನು ಅವಲೋಕಿಸುವುದು ಈ ಸಭೆಯ ಪ್ರಮುಖ ಅಜೆಂಡಾ ಆಗಿರುತ್ತದೆ.
ಆಸ್ಪತ್ರೆ ಕಾರ್ಯಾಚರಣೆಗಳು, ರೋಗಿ ಅನುಭವ ಮತ್ತು ಕ್ಲಿನಿಕಲ್ ಪರಿಣಾಮಗಳ ವಿಚಾರದಲ್ಲಿ ನಾಯಕತ್ವ ಪ್ರೇರಿತ ಸೇಫ್ಟಿ ಮಾಡಲ್ಗಳು, ಮಾನವ ಕೇಂದ್ರಿತ ವಿನ್ಯಾಸ, ಡಿಜಿಟಲ್ ಪರಿವರ್ತನೆ ಮತ್ತು ಶ್ರೇಷ್ಠತೆ ಸಾಧಿಸುವುದು ಈ ಆಯಾಮಗಳ ಬಗ್ಗೆ ಐಎಚ್ಡಿ 2026 ಕಾರ್ಯಕ್ರಮದಲ್ಲಿ ಗಮನ ಹರಿಸಲಾಗುತ್ತದೆ.
ಈ ಕಾರ್ಯಕ್ರಮ ಆಯೋಜಿಸುತ್ತಿರುವ ಅಪೋಲೋ ಹಾಸ್ಪಿಟಲ್ಸ್ ಗ್ರೂಪ್ನ ಜಂಟಿ ಎಂಡಿಯಾಗಿರುವ ಡಾ. ಸಂಗೀತಾ ರೆಡ್ಡಿ ಅವರು ಈ ಕಾರ್ಯಕ್ರಮದ ಬಗ್ಗೆ ಮಾತನಾಡಿ, ಎಐ, ಡಾಟಾ ಮತ್ತು ಡಿಜಿಟಲ್ ಇಕೋಸಿಸ್ಟಂಗಳ ಶಕ್ತಿಯನ್ನು ಒಗ್ಗೂಡಿಸುತ್ತಿದೆ ಎಂದು ಹೇಳಿದ್ದಾರೆ.
‘ಹೆಲ್ತ್ಕೇರ್ ತಜ್ಞರು, ಇನ್ನೋವೇಟರ್ಗಳು, ನೀತಿ ರೂಪಕರು, ಪ್ರೇರಕರು (Evangelists) ಒಂದೆಡೆ ಸೇರಿ ಹೆಲ್ತ್ಕೇರ್ ಕ್ಷೇತ್ರದ ಮುಂದಿನ ಹಾದಿಯನ್ನು ರೂಪಿಸುವ ಒಂದು ವೇದಿಕೆಯಾಗಿ ಇಂಟರ್ನ್ಯಾಷನಲ್ ಹೆಲ್ತ್ ಡೈಲೋಗ್ ಮಾರ್ಪಾಡಾಗಿದೆ. ಹೆಲ್ತ್ಕೇರ್ ಅನ್ನು ಹೆಚ್ಚು ಸುಸ್ಥಿರವಾಗುವ ನಿಟ್ಟಿನಲ್ಲಿ ಜಾಗತಿಕ ಬದ್ಧತೆಯನ್ನು ಐಎಚ್ಡಿ ಪ್ರತಿನಿಧಿಸುತ್ತದೆ. ಪ್ರತಿಯೊಂದು ಇನ್ನೋವೇಶನ್ ಕೂಡ ಮಾನವತೆಗೆ ಸೇವೆ ಸಲ್ಲಿಸುತ್ತದೆ. ಪ್ರತಿಯೊಂದು ಜೊತೆಗಾರಿಕೆಯೂ ಕೂಡ ವಿಶ್ವದ ಆರೋಗ್ಯಕ್ಕೆ ಕಾರಣವಾಗುತ್ತದೆ’ ಎಂದು ಡಾ. ಸಂಗೀತಾ ರೆಡ್ಡಿ ಹೇಳಿದ್ದಾರೆ.
ಹೈದರಾಬಾದ್ನಲ್ಲಿ ನಡೆಯುವ ಐಎಚ್ಡಿ 2026 ಸಮಾವೇಶದಲ್ಲಿ ಈ ಕೆಳಗಿನ ನಾಲ್ಕು ಕಾನ್ಫರೆನ್ಸ್ಗಳು ಮತ್ತು ಲರ್ನಿಂಗ್ ಸ್ಟ್ರೀಮ್ಗಳು ಇರಲಿವೆ:
ಐಪಿಎಸ್ಸಿ (ಇಂಟರ್ನ್ಯಾಷನಲ್ ಪೇಶೆಂಟ್ ಸೇಫ್ಟಿ ಕಾನ್ಫರೆನ್ಸ್): ಸ್ವಯಂಪ್ರೇರಿತವಾದ ಪ್ರಾಕ್ಟಿಸ್ ಮತ್ತು ಹೆಲ್ತ್ಕೇರ್ ಸಿಸ್ಟಂಗಳು ರೋಗಿ ಸುರಕ್ಷತೆಯನ್ನು ಹೇಗೆ ಸುಧಾರಿಸುತ್ತವೆ ಎಂಬುದನ್ನು ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ.
ಎಚ್ಒಪಿಇ (ಹೆಲ್ತ್ಕೇರ್ ಆಪರೇಷನ್ಸ್ ಮತ್ತು ಪೇಷೆಂಟ್ ಎಕ್ಸ್ಪೀರಿಯನ್ಸ್ ಕಾನ್ಫರೆನ್ಸ್): ರೋಗಿಗೆ ಚಿಕಿತ್ಸೆ ನೀಡುವ ಪ್ರತೀ ಮುಖ್ಯ ಘಟ್ಟಗಳಲ್ಲೂ ಕ್ಷಮತೆ, ನಾವೀನ್ಯತೆ ತರುವ ಬಗ್ಗೆ ವಿಧಾನಗಳ ಬಗ್ಗೆ ಚರ್ಚಿಸಲಾಗುತ್ತದೆ.
ಟಿಎಚ್ಐಟಿ (ಟ್ರಾನ್ಸ್ಫಾರ್ಮಿಂಗ್ ಹೆಲ್ತ್ಕೇರ್ ವಿತ್ ಐಟಿ): ಈ ಕಾನ್ಫರೆನ್ಸ್ನಲ್ಲಿ ವಿಶ್ವಾದ್ಯಂತ ಹೆಲ್ತ್ಕೇರ್ ಮತ್ತು ಐಟಿ ಮುಖಂಡರನ್ನು ಒಟ್ಟಿಗೆ ಸೇರಲಿದ್ದಾರೆ. ಅವರ ಅತ್ಯಾಧುನಿಕ ವಿಧಾನಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ.
ಕ್ಲಿನೋವೇಟ್: ಕ್ಯಾನ್ಸರ್ ರೋಗ, ಹೃದ್ರೋಗ, ಮಹಿಳಾ ಆರೋಗ್ಯ, ಲ್ಯಾಬ್ ಮೆಡಿಸಿನ್ ಮೇಲೆ ಕ್ಲಿನಿಕಲ್ ಸಿಎಂಇ ಸೀರೀಸ್ ಇರುತ್ತದೆ. ಇದರಲ್ಲಿ ಹೆಲ್ತ್ಕೇರ್ ವೃತ್ತಿಪರರು ಮತ್ತು ಸಂಶೋಧಕರಿಗೆ ತಜ್ಞರಿಂದ ಕಲಿಕೆ ನೀಡಲಾಗುತ್ತದೆ.
ಜನವರಿ 30 ಮತ್ತು 31ರಂದು ನಡೆಯುವ ಈ ಸಮಾವೇಶದಲ್ಲಿ ಆರೋಗ್ಯ ಕ್ಷೇತ್ರದ ಹಲವು ಮುಖಂಡರು ಮತ್ತು ನೀತಿ ರೂಪಕರು ಪಾಲ್ಗೊಳ್ಳುತ್ತಾರೆ. ನೈಜರ್ ರಿಪಬ್ಲಿಕ್ನ ಪಬ್ಲಿಕ್ ಹೆಲ್ತ್ ಸಚಿವ ಕರ್ನಲ್ ಮೇಜರ್ ಗರ್ಬಾ ಹಕಿಮಿ, ಪಪುವಾ ನ್ಯೂಗಿನಿಯಾದ ಆರೋಗ್ಯ ಸಚಿವ ಇಲಿಯಾಸ್ ಕಪವೋರೆ, ಕಾಂಗೋ ರಿಪಬ್ಲಿಕ್ನ ಆರೋಗ್ಯ ಸಚಿವ ಇಬಾರ, ಬರ್ಮುಡಾದ ಆರೋಗ್ಯ ಸಚಿವ ಕಿಮ್ ವಿಲ್ಸನ್ ಅವರು ಭಾಗವಹಿಸುತ್ತಿದ್ದಾರೆ.
ಆರೋಗ್ಯ ಕ್ಷೇತ್ರದ ಹಲವು ಸಂಘ ಸಂಸ್ಥೆಗಳ ಮುಖ್ಯಸ್ಥರಾದ ಡಾ. ಜೋನಾತನ್ ಪೆರ್ಲಿನ್, ಡಾ. ಕಾರ್ಸ್ಟನ್ ಎಂಜೆಲ್, ಡಾ. ಡೀನ್ ಹೋ, ಡಾ ಅತುಲ್ ಮೋಹನ್ ಕೋಚ್ಚರ್, ಡಾ. ನೀಲಮ್ ಧಿಂಗ್ರ, ಡಾ. ಇಯಾಲ್ ಝಿಮ್ಲಿಕ್ಮನ್ ಮೊದಲಾದವರು ಪಾಲ್ಗೊಳ್ಳುತ್ತಿದ್ದಾರೆ.
ಈ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಅಧಿಕೃತ ವೆಬ್ಸೈಟ್ಗಳ ಲಿಂಕ್ ಇಲ್ಲಿದೆ:
internationalhealthdialogue.com/
www.patient-safety.co.in
www.hopeconference.co.in/














Comments