ಗಿಲ್ಲಿಗೆ ಗೋಲ್ಡ್ ಚೈನ್ ಗಿಫ್ಟ್: ಶರವಣನ ವೈರಲ್ ವಿಡಿಯೋ
ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ ಆದ ಬಳಿಕ ಗಿಲ್ಲಿ ನಟನ (Gilli Nata) ಲಕ್ ಸಂಪೂರ್ಣವಾಗಿ ಬದಲಾಗಿದೆ. ಬಿಗ್ ಬಾಸ್ನಿಂದ ಗೆಲುವು ಒಂದು ಕಡೆಯಾದರೆ, ಅವರಿಗೆ ಸಿಕ್ಕ ಜನಪ್ರಿಯತೆ ಮತ್ತೊಂದು ಕಡೆ. ಇದರ ಜೊತೆಗೆ ಧನಲಕ್ಷ್ಮೀ ಕೂಡ ಗಿಲ್ಲಿಯನ್ನು ಹುಡುಕಿ ಬರುತ್ತಿದೆ. ಹೀಗಿರುವಾಗಲೇ ಗಿಲ್ಲಿ ನಟನಿಗೆ ಶರವಣ ಅವರು ಗೋಲ್ಡ್ ಚೈನ್ ಗಿಫ್ಟ್ ಕೊಟ್ಟಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಈ ಸಂದರ್ಭದ ವಿಡಿಯೋನ ವೈರಲ್ ಆಗಿದ್ದು, ಗಮನ ಸೆಳೆಯುತ್ತಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ ಸಾಯಿ ಗೋಲ್ಡ್ ಪ್ಯಾಲೆಸ್ ಮುಖ್ಯಸ್ಥ ಶರವಣ ಕಡೆಯಿಂದ 20 ಲಕ್ಷ ರೂಪಾಯಿ ವೋಚರ್ ನೀಡಲಾಗಿದೆ. ಸಾಯಿ ಗೋಲ್ಡ್ ಪ್ಯಾಲೆಸ್ನಲ್ಲಿ 20 ಲಕ್ಷ ರೂಪಾಯಿವರೆಗೆ ಚಿನ್ನ ಖರೀದಿಸೋ ಅವಕಾಶ ಇದೆ. ವೇದಿಕೆಗೆ ಬಂದು ಅವರು ವೋಚರ್ನ ರಕ್ಷಿತಾಗೆ ನೀಡಿದ್ದರು.
ಶರವಣ ಅವರಿಗೆ ಗಿಲ್ಲಿ ಬಗ್ಗೆ ವಿಶೇಷ ಒಲವು ಇದೆ. ಫಿನಾಲೆಗೆ ತೆರಳುವುದಕ್ಕೂ ಮೊದಲು ಮಾತನಾಡಿದ್ದ ಶರವಣ ಅವರು, ‘ಗಿಲ್ಲಿನೇ ಗೆಲ್ತಾನೆ’ ಎಂದು ಭವಿಷ್ಯ ನುಡಿದಿದ್ದರು. ‘ಗಿಲ್ಲಿ ಗೆದ್ರೆ ನನ್ನ ಕಡೆಯಿಂ 20 ಲಕ್ಷ ರೂಪಾಯಿ ಕೊಡ್ತೀನಿ’ ಎಂದಿದ್ದರು. ಆದರೆ, ಬಿಗ್ ಬಾಸ್ ವೇದಿಕೆ ಮೇಲೆ ಅವರು ಈ ಹಣವನ್ನು ನೀಡಿರಲಿಲ್ಲ. ಈಗ ಶಾಪ್ ಓಪನಿಂಗ್ಗೆ ಬಂದ ಗಿಲ್ಲಿಗೆ ಅವರು ಚಿನ್ನದ ಚೈನ್ ಹಾಕಿದ್ದಾರೆ.














Comments