• Apr 14, 2026
  • NPN Log
    ನಿರ್ದೇಶಕ ರಾಜಮೌಳಿ 'ವಾರಣಾಸಿ' ಸಿನಿಮಾದ ಕೆಲಸಗಳ ನಡುವೆ ಜಪಾನಿ ಸ್ಟುಡಿಯೋಗಳೊಂದಿಗೆ ದೊಡ್ಡ ಒಪ್ಪಂದಕ್ಕೆ ಮುಂದಾಗಿದ್ದಾರೆ. 'ಆರ್ಆರ್ಆರ್' ಚಿತ್ರವನ್ನು ಅನಿಮೆ ರೂಪದಲ್ಲಿ ನಿರ್ಮಿಸಲು ಮಾತುಕತೆ ನಡೆಸಲಾಗುತ್ತಿದೆ. ಈ ಕುರಿತು ಅವರೇ ಖಚಿತಪಡಿಸಿದ್ದು, ಡೀಲ್ ಅಂತಿಮವಾದರೆ 'ಆರ್ಆರ್ಆರ್' ಅನಿಮೆ ಭಾಗವಾಗುವ ಸಾಧ್ಯತೆ ಇದೆ. ನಿರ್ದೇಶಕ ರಾಜಮೌಳಿ (Rajamouli) ಅವರು ‘ವಾರಣಾಸಿ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ರಾಜಮೌಳಿ ಅವರು ಸದ್ದಿಲ್ಲದೆ, ಸೈಡಲ್ಲಿ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಈ ವಿಷಯ ಅನೇಕರಿಗೆ ಅಚ್ಚರಿ ಮೂಡಿಸಿದೆ. ಈ ವಿಷಯವನ್ನು ಸ್ವತಃ ಅವರೇ ಖಚಿತಪಡಿಸಿದ್ದಾರೆ. ‘ವಾರಣಾಸಿ’ ಸಿನಿಮಾ 2027ರ ಏಪ್ರಿಲ್ 7ರಂದು ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಈಗಲೇ ಪ್ರಚಾರ ಆರಂಭಿಸಿದ್ದಾರೆ. ಇತ್ತೀಚೆಗೆ ಅವರು ಪ್ರಿಯಾಂಕಾ ಚೋಪ್ರಾ, ಮಹೇಶ್ ಬಾಬು, ಪೃಥ್ವಿರಾಜ್ ಸುಕುಮಾರನ್ ಜೊತೆ ಹಾಲಿವುಡ್ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದ ವೇಳೆ ರಾಜಮೌಳಿ ಅವರು ಈ ವಿಷಯ ಹೇಳಿದ್ದಾರೆ. ‘ಆರ್​ಆರ್​​ಆರ್​’ಸಿನಿಮಾನ ಜಪಾನ್ ಅಲ್ಲೂ ನೋಡಿದ್ದಾರೆ. ಅಲ್ಲಿಯೂ ಈ ಚಿತ್ರ ಇಷ್ಟಪಟ್ಟಿದ್ದಾರೆ. ಈ ಸಿನಿಮಾನ ಅನಿಮೇ ವರ್ಷನ್ ಅಲ್ಲಿ ಮಾಡಲು ಜಪಾನ್ ಸ್ಟುಡಿಯೋಗಳ ಜೊತೆ ಮಾತುಕತೆ ನಡೆದಿದೆ. ಆದರೆ, ಯಾವುದೂ ಫೈನಲ್ ಆಗಿಲ್ಲವಂತೆ. ಒಂದೊಮ್ಮೆ ಈ ಡೀಲ್ ಫೈನಲ್ ಆದರೆ, ಇದರ ಕೆಲಸಗಳಲ್ಲಿ ಅವರು ತೊಡಗಿಕೊಳ್ಳಬಹುದು. ‘ವಾರಣಾಸಿ’ ಸಿನಿಮಾ ಶೂಟಿಂಗ್ ಹಂತದಲ್ಲಿ ಇದೆ. ಈ ಚಿತ್ರ ರಿಲೀಸ್​​ಗೆ ಇನ್ನೂ ಒಂದು ವರ್ಷ ಇದೆ. ಈ ಸಿನಿಮಾ ಟೈಟಲ್ ರಿವೀಲ್​​ಗೆ ದೊಡ್ಡ ಮಟ್ಟದಲ್ಲಿ ಈವೆಂಟ್ ಮಾಡಲಾಗಿತ್ತು. ಕೆಲ ತಾಂತ್ರಿಕ ಸಮಸ್ಯೆ ಬಿಟ್ಟರೆ ಈ ಕಾರ್ಯಕ್ರಮ ಯಶಸ್ಸು ಕಂಡಿತ್ತು. ರಾಜಮೌಳಿ ‘ಆರ್​​ಆರ್​​ಆರ್​’ ಚಿತ್ರದ ಅನಿಮೇ ಚಿತ್ರದ ಭಾಗ ಆಗುತ್ತಾರಾ ಎಂಬ ಕುತೂಹಲ ಮೂಡಿದೆ. ಕೆಲವು ಬದಲಾವಣೆಗಳನ್ನು ಅವರು ಮಾಡಿಕೊಳ್ಳಲು ರಾಜಮೌಳಿ ಸಹಾಯ ಮಾಡಬಹುದು.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion