ಗಡಿಯಲ್ಲಿ ಚೀನಾದ ಮೆಗಾ ಹೆದ್ದಾರಿ; ಭಾರತದ ಭದ್ರತೆಗೆ ಸವಾಲು?
ಚೀನಾ ಭಾರತದ ಗಡಿಗೆ ಸಮೀಪವಾಗಿ ಸುಮಾರು 25,000 ಕಿ.ಮೀ ಉದ್ದದ ‘ಗೋಲ್ಡನ್ ಬಾರ್ಡರ್-ಕೋಸ್ಟ್ ಲೂಪ್’ ಹೆದ್ದಾರಿ ಯೋಜನೆ ಕೈಗೊಂಡಿದೆ ಎಂದು ವರದಿಯಾಗಿದೆ. G219 ಹೆದ್ದಾರಿಯ ಈ ವಿಸ್ತರಣೆ ಚೀನಾದ ಗಡಿ ಪ್ರದೇಶಗಳಲ್ಲಿ ಸಂಪರ್ಕ ಮತ್ತು ಸೇನಾ ನಿಯೋಜನೆಗೆ ನೆರವಾಗುವ ಸಾಧ್ಯತೆ ಇದೆ. ಟಿಬೆಟ್‌ನ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುತ್ತಿರುವ ನಿರ್ಮಾಣವು ಭದ್ರತೆ ಹಾಗೂ ಪರಿಸರದ ಬಗ್ಗೆ ಆತಂಕ ಮೂಡಿಸಿದೆ. ಇದಕ್ಕೆ ಪ್ರತಿಯಾಗಿ ಭಾರತವೂ LAC ಉದ್ದಕ್ಕೂ ರಸ್ತೆ, ಸೇತುವೆ ಹಾಗೂ ಇತರ ಗಡಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ವೇಗಗೊಳಿಸುತ್ತಿದೆ.














Comments