ಹಬ್ಬಕ್ಕೂ ಮುನ್ನ ಗ್ರಾಹಕರಿಗೆ ಶಾಕ್: ಚಿನ್ನ-ಬೆಳ್ಳಿ ದರ ಗಗನಕ್ಕೆ
ಇನ್ನೇನು ಚೌತಿ, ಗಣೇಶ ಹಬ್ಬ , ದೀಪಾವಳಿ ಎನ್ನುತ ಸಾಲು ಸಾಲು ಹಬ್ಬಗಳು ಬರುತ್ತಿವೆ. ಈ ಸಂದರ್ಭದಲ್ಲಿ ಚಿನ್ನ-ಬೆಳ್ಳಿ ಖರೀದಿಸುವವರ ಸಂಖ್ಯೆ ಕೂಡ ಹೆಚ್ಚಿರುತ್ತದೆ. ಹಾಗಾಗಿ ದಿನದಿಂದ ದಿನಕ್ಕೆ ಚಿನ್ನ, ಬೆಳ್ಳಿ ದರ ಗಗನಕ್ಕೇರುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳು ನೇರವಾಗಿ ನಮ್ಮ ದೇಶೀಯ ಮಾರುಕಟ್ಟೆಯ ಮೇಲೂ ಭಾರಿ ಪ್ರಮಾಣದ ಪರಿಣಾಮ ಬೀರಿದೆ. ಅಮೆರಿಕದ ಆರ್ಥಿಕ ಅಂಕಿ-ಅಂಶಗಳು ಹಾಗೂ ಡಾಲರ್ ಮೌಲ್ಯದಲ್ಲಿನ ಇಳಿತದಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಆಭರಣ ಪ್ರಿಯರು ಚಿನ್ನ ಖರೀದಿಸುವ ಮುನ್ನ ಇಂದಿನ ನಿಖರವಾದ ದರವನ್ನು ತಿಳಿದುಕೊಳ್ಳುವುದು ತುಂಬ ಮುಖ್ಯ. ತಜ್ಞರ ಪ್ರಕಾರ ಈ ಏರಿಳಿತಗಳು ಮುಂದಿನ ಕೆಲವು ದಿನಗಳ ಕಾಲ ಹೀಗೆ ಮುಂದುವರಿಯುವ ಸಾಧ್ಯತೆ ಇದೆ. ರಾಜ್ಯದ ರಾಜಧಾನಿಯಲ್ಲಿ ಚಿನ್ನದ ದರ ಹೇಗಿದೆ ಎಂಬುದು ಪ್ರತಿಯೊಬ್ಬರ ಕುತೂಹಲದ ವಿಷಯ ಅಲ್ಲವೇ?. ಇಂದು ಬೆಂಗಳೂರಿನಲ್ಲಿ ಚಿನ್ನ ಚಿನ್ನ, ಬೆಳ್ಳಿ ಬೆಲೆ ಇಂದು ತುಸು ಏರಿಕೆ ಕಂಡಿದ್ದು, ಗ್ರಾಹಕರಿಗೆ ಕೊಂಚ ನಿರಾಸೆ ಮೂಡಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೇಡಿಕೆ, ಆಮದು ಸುಂಕ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯದ ಆಧಾರದ ಮೇಲೆ ದೇಶೀಯ ಆಭರಣ ಮಾರುಕಟ್ಟೆಯಲ್ಲಿ ದರ ನಿಗದಿಯಾಗುತ್ತದೆ. ಅದರಂತೆ ಇಂದು ಸಿಲಿಕಾನ್ ಸಿಟಿ ಬೆಂಗಳೂರಿನ ಮಾರುಕಟ್ಟೆಯಲ್ಲಿ ಆಭರಣದ ದರವು ನಿನ್ನೆಗಿಂತ ತುಟ್ಟಿ ಎನಿಸಿದೆ. ಮದುವೆ ಹಾಗೂ ಶುಭ ಸಮಾರಂಭಗಳಿಗೆ ಆಭರಣ ಖರೀದಿಸುವ ಯೋಜನೆಯಲ್ಲಿದ್ದವರಿಗೆ ಈ ಬೆಲೆ ಏರಿಕೆ ಕೊಂಚ ಆರ್ಥಿಕ ಹೊರೆಯಾಗಲಿದೆ. Also Read GDP ಏರಿಕೆ ನಡುವೆಯೂ ಚಿನ್ನ, ವಿದೇಶಿ ಪ್ರವಾಸಕ್ಕೆ ಮೋದಿ 'ಬೇಡ’ ಎಂದಿದ್ದೇಕೆ? ಇದರ ಹಿಂದಿದೆ ಆರ್ಥಿಕ ಲೆಕ್ಕಾಚಾರ! ನಿನ್ನೆಯ ದರಗಳಿಗೆ ಹೋಲಿಸಿದರೆ, ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಸ್ಪಷ್ಟ ಏರಿಕೆ ಕಂಡುಬಂದಿದೆ. ನಿನ್ನೆ (ಸೆಪ್ಟೆಂಬರ್ 2) ಮಾರುಕಟ್ಟೆಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,935 ರೂಪಾಯಿ ಇತ್ತು. ಆದರೆ ಇಂದು ಅದು 14,240 ರೂಪಾಯಿಗೆ ತಲುಪುವ ಮೂಲಕ ಪ್ರತಿ ಗ್ರಾಂಗೆ ಬರೋಬ್ಬರಿ 305 ರೂಪಾಯಿಗಳಷ್ಟು ಭಾರಿ ಏರಿಕೆಯಾಗಿದೆ. ಹಾಗೆಯೇ ಬೆಳ್ಳಿ ಬೆಲೆಯೂ ಕೂಡ ಗಮನಾರ್ಹ ಏರಿಕೆ ಕಂಡಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ಎಂಸಿಎಕ್ಸ್ ವಹಿವಾಟುಗಳ ಪ್ರಭಾವದಿಂದಾಗಿ ಪ್ರತಿ ಕೆಜಿಗೆ ಅಂದಾಜು 2.50 ಲಕ್ಷ ರೂಪಾಯಿಗಳು ಅಂದರೆ ಪ್ರತಿ ಗ್ರಾಂ ಬೆಳ್ಳಿಗೆ 250 ರೂಪಾಯಿ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಸ್ಥಳೀಯ ತೆರಿಗೆಗಳು (ಲೋಕಲ್ ಟ್ಯಾಕ್ಸ್) ಹಾಗೂ ಸಾರಿಗೆ ವೆಚ್ಚದ ಆಧಾರದ ಮೇಲೆ ಚಿನ್ನದ ದರದಲ್ಲಿ ಕೊಂಚ ಬದಲಾವಣೆ ಇರುತ್ತದೆ. ಇಂದಿನ ಆಭರಣ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರವು ಗ್ರಾಹಕರ ಜೇಬಿಗೆ ಕೊಂಚ ಕತ್ತರಿ ಹಾಕಲಿದೆ. ನಿನ್ನೆಗೆ ಹೋಲಿಸಿದರೆ ಚಿನ್ನದ ದರದಲ್ಲಿ ಪ್ರತಿ ಗ್ರಾಂಗೆ 305 ರೂ. ಏರಿಕೆಯಾಗಿದ್ದು, ಮುಂಬರುವ ದಿನಗಳಲ್ಲಿ ಈ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಖರೀದಿದಾರರು ಆಭರಣವನ್ನು ಖರೀದಿಸುವಾಗ ಕೇವಲ ಮೂಲ ಬೆಲೆಯನ್ನು ಮಾತ್ರವಲ್ಲದೆ, ಮೇಕಿಂಗ್ ಚಾರ್ಜಸ್ (ತಯಾರಿಕಾ ವೆಚ್ಚ) ಹಾಗೂ 3% ಜಿಎಸ್ಟಿ (GST) ಯನ್ನು ಕೂಡ ಪರಿಗಣಿಸಬೇಕು ಎಂಬುದನ್ನು ಮರೆಯಬಾರದು.











Comments