• Feb 03, 2026
  • NPN Log
    Expectations of Real Estate from Union Budget 2026: ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಉತ್ತೇಜನ ನೀಡುವಂತಹ ಕ್ರಮಗಳನ್ನು ಸರ್ಕಾರ ಕಳೆದ ಕೆಲ ವರ್ಷಗಳಿಂದ ತೆಗೆದುಕೊಂಡು ಬಂದಿದೆ. ಸರ್ಕಾರದ ಈ ನೀತಿ ಹೀಗೆ ಮುಂದುವರಿಯಲಿ ಎಂದು ಈ ಸೆಕ್ಟರ್ ಅಪೇಕ್ಷಿಸುತ್ತಿದೆ. ಎರಡನೇ ಸ್ತರದ ನಗರಗಳಲ್ಲಿ ಕೈಗಾರಿಕಾ ಕಾರಿಡಾರ್​ಗಳು, ಮೂಲಸೌಕರ್ಯ ಪ್ರಾಜೆಕ್ಟ್​ಗಳನ್ನು ಕೈಗೊಳ್ಳಲಿ ಎಂಬುದು ಇದರ ಹಲವು ನಿರೀಕ್ಷೆಗಳಲ್ಲಿ ಒಂದು. ಕಳೆದ ಕೆಲ ವರ್ಷಗಳಿಂದ ಸರ್ಕಾರ ಇನ್​ಫ್ರಾಸ್ಟ್ರಕ್ಚರ್ ಕ್ಷೇತ್ರಕ್ಕೆ ಮುತುವರ್ಜಿ ತೋರುತ್ತಾ ಬರುತ್ತಿದೆ. ವಸತಿ ಪ್ರಾಜೆಕ್ಟ್​ಗಳು, ಕೈಗಾರಿಕಾ ಕಾರಿಡಾರ್​ಗಳು ಸಾಕಷ್ಟು ನಿರ್ಮಾಣ ಆಗಿವೆ, ಆಗುತ್ತಿವೆ. ಇನ್​ಫ್ರಾಸ್ಟ್ರಕ್ಚರ್ ಉತ್ತಮಗೊಂಡಂತೆ ರಿಯಲ್ ಎಸ್ಟೇಟ್ (Real Estate sector) ಉದ್ಯಮವೂ ಗರಿಗೆದರುತ್ತಾ ಬಂದಿದೆ. ಸರ್ಕಾರದ ಈ ಸುಧಾರಣಾ ಕ್ರಮಗಳು ಸ್ಥಗಿತಗೊಳ್ಳದೆ ಮುಂದುವರಿಯುತ್ತಾ ಹೋಗಲಿ ಎಂಬುದು ಈ ಉದ್ಯಮವು ಬಜೆಟ್​ನಿಂದ ಮಾಡುತ್ತಿರುವ ನಿರೀಕ್ಷೆ. ಉದ್ಯೋಗ ಸೃಷ್ಟಿ, ಯೋಜಿತ ನಗರೀಕರಣ, ದೀರ್ಘಕಾಲೀನ ಆರ್ಥಿಕ ಕ್ಷಮತೆ ಇವುಗಳಿಗೆ ರಿಯಲ್ ಎಸ್ಟೇಟ್ ಸೆಕ್ಟರ್ ಶಕ್ತಿ ತುಂಬಬೇಕಾದರೆ, ಅಭಿವೃದ್ಧಿ ಪೂರಕವಾದ ಮತ್ತು ಸಮತೋಲಿತವಾದ ಬಜೆಟ್​ನಿಂದ ಸಾಧ್ಯ ಎಂದು ಬೆಂಗಳೂರಿನ ಮನ ಪ್ರಾಜೆಕ್ಟ್ಸ್​ನ (Mana Projects) ಸಿಎಂಡಿ ಡಿ. ಕಿಶೋರ್ ರೆಡ್ಡಿ ಹೇಳುತ್ತಾರೆ. ಸರ್ಕಾರದ ನೀತಿಗಳು ಮುಂದುವರಿಯಬೇಕು. ವಿವಿಧ ಹೌಸಿಂಗ್ ಸೆಗ್ಮೆಂಟ್​ಗಳಲ್ಲಿ ಗ್ರಾಹಕರ ವಿಶ್ವಾಸ ಮೂಡಿಸುವಂತಹ ಮತ್ತು ಭವಿಷ್ಯದ ದೃಷ್ಟಿಯಿಂದ ಮಾಡಲಾಗುವ ಸುಧಾರಣೆಗಳೂ ಬರಬೇಕು. ನಿರ್ಮಾಣ ಹಂತದಲ್ಲಿರುವ ಪ್ರಾಪರ್ಟಿಗಳ ಮೇಲೆ ಜಿಎಸ್​ಟಿ ದರ ಇಳಿಸಬೇಕು. ಗೃಹ ಸಾಲದ ಬಡ್ಡಿ ಮೇಲೆ ಡಿಡಕ್ಷನ್ ಮಿತಿಯನ್ನು ಹೆಚ್ಚಿಸಬೇಕು ಎಂದು ಕಿಶೋರ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ಉದಯೋನ್ಮುಖವಾಗಿರುವ ಹಾಗೂ ಎರಡನೇ ಸ್ತರದ ನಗರಗಳಲ್ಲಿ (ಟಯರ್-2 ಸಿಟಿ) ಇನ್​ಫ್ರಾಸ್ಟ್ರಕ್ಚರ್ ಮತ್ತು ನಗರ ಸಂಪರ್ಕತೆಯಲ್ಲಿ ಸತತ ಹೂಡಿಕೆ ಮಾಡಬೇಕು. ಇದರಿಂದ ಹೊಸ ವಸತಿ ಕಾರಿಡಾರ್​ಗಳು ಹೊರಹೊಮ್ಮಲು ಸಾಧ್ಯ. ಸಮತೋಲಿತವಾದ ನಗರ ಬೆಳವಣಿಗೆ ಸಾಧ್ಯ. ಹಾಗೆಯೇ, ಏಕ ಗವಾಕ್ಷಿ ಸಿಸ್ಟಂ ಮೂಲಕ ವೇಗವಾಗಿ ಪ್ರಾಜೆಕ್ಟ್​ಗಳ ಅನುಮೋದನೆ ಆಗಬೇಕು. ಎಫ್​ಡಿಐ ನಿಯಮಗಳಲ್ಲಿ ಸ್ಪಷ್ಟತೆ ಬರಬೇಕು ಎಂದೂ ಮನ ಪ್ರಾಜೆಕ್ಟ್ಸ್​ನ ಸಿಎಂಡಿ ಸಲಹೆ ನೀಡಿದ್ದಾರೆ. ರಿಯಲ್ ಎಸ್ಟೇಟ್ ಮಾರುಕಟ್ಟೆ ನಿಧಾನಗೊಳ್ಳುತ್ತಿದೆಯಾ? ವಿಎಸ್ ರಿಯಾಲ್ಟರ್ಸ್ ಸಂಸ್ಥೆಯ ಸಿಇಒ ವಿಜಯ್ ಹರ್ಷ್ ಪ್ರಕಾರ ರಿಯಲ್ ಎಸ್ಟೇಟ್ ಮಾರುಕಟ್ಟೆ ಮಂದಗೊಳ್ಳುತ್ತಿರುವ ಆರಂಭಿಕ ಸುಳಿವು ಇದೆ. ಪ್ರಾಪರ್ಟಿಗಳು ಮಾರಾಟವಾಗುತ್ತಿರುವ ಪ್ರಮಾಣ ಕಡಿಮೆ ಆಗುತ್ತಿದೆ. ಅದರಲ್ಲೂ ಅಧಿಕ ಬೇಡಿಕೆ ಇರುವ 1 ಕೋಟಿ ರೂ ಒಳಗಿನ ಮನೆಗಳ ಮಾರಾಟ ಕುಂಠಿತಗೊಳ್ಳುತ್ತಿದೆ ಎನ್ನುತ್ತಾರೆ ವಿಜಯ್ ಹರ್ಷ್. ಲ್ಯಾಂಡ್ ಡೆಲವಪರ್​ಗಳಿಗೆ ಕಡಿಮೆ ದರದಲ್ಲಿ ಭೂಮಿ ಸಿಗುವಂತಹ ವ್ಯವಸ್ಥೆ ಮಾಡಬೇಕು. ಮನೆ ಖರೀದಿದಾರರಿಗೆ ಗೃಹ ಸಾಲಗಳಿಗೆ ಡಿಡಕ್ಷನ್ ಇತ್ಯಾದಿ ತೆರಿಗೆ ರಿಯಾಯಿತಿ ಸೌಲಭ್ಯ ಕೊಟ್ಟರೆ ಈ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಚುರುಕು ಮುಟ್ಟಬಹುದು ಎನ್ನುತ್ತಾರೆ ವಿಎಸ್ ರಿಯಾಲ್ಟರ್ಸ್​ನ ಸಂಸ್ಥಾಪಕರು.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion