ಟೂ ಪೀಸ್‌ನಲ್ಲಿ ನಟಿಸಿದ್ದು ಏಕೆ? ದಿಯಾ ಮಿರ್ಜಾ ಹೇಳಿದ್ದೇನು?
ಬಾಲಿವುಡ್ ನಟಿಯೊಬ್ಬರು ವಿಚಿತ್ರವಾದ ಮಾತನ್ನು ಆಡಿ ಸುದ್ದಿಯಲ್ಲಿದ್ದಾರೆ. ಹೆಚ್ಚಿನ ನಟಿಯರು ನೂರಾರು ಜನರ ಮುಂದೆ ತುಂಡು ಬಟ್ಟೆಯಲ್ಲಿ ಕುಣಿಯೋದನ್ನು ಶಿಕ್ಷೆ ಅಂತ ಭಾವಿಸಿದರೆ ಈ ನಟಿ ಸರಿಯಾಗಿ ಉಲ್ಟಾ ರೀತಿಯಲ್ಲಿ ಮಾತನಾಡಿದ್ದಾರೆ. ನೂರಾರು ಜನರ ಮುಂದೆ ಟೂ ಪೀಸ್‌ನಲ್ಲಿ ಕುಣಿದಾಗ ಅಂಜಿಕೆ, ಮುಜುಗರ ಆಗುತ್ತೆ ಅನ್ನೋದರ ಬದಲು ನೂರು, ಸಾವಿರ ಜನರ ಮುಂದೆ ಕುಣಿದಿದ್ದು ನನ್ನ ಆತ್ಮವಿಶ್ವಾಸ ಹೆಚ್ಚಿಸಿತು ಅಂದಿದ್ದಾರೆ. ಅದು ಹೇಗೆ ಅಂತ ಅಂತ ಆಕೆಯ ಮಾತನ್ನು ಕೇಳಿದ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಹತ್ತಾರು ಬಗೆಯ ಟ್ರೋಲ್‌ಗಳು, ಕಾಮೆಂಟ್‌ಗಳು ಕೇಳಿಬರುತ್ತಿವೆ. ಅಷ್ಟಕ್ಕೂ ಆ ನಟಿ ಯಾರು, ಅದ್ಹೇಗೆ ಜನರ ಮುಂದೆ ತುಂಡುಬಟ್ಟೆಯಲ್ಲಿ ಕುಣಿದಿದ್ದು ಅವರ ಕಾನ್ಫಿಡೆನ್ಸ್ ಜಾಸ್ತಿ ಮಾಡಿತು ಅನ್ನೋದನ್ನು ಅವರೇ ಹೇಳಿದ್ದಾರೆ. ಮೂರು ರಾಶಿಯವರಿಗೆ ಇಂದು ಒಲಿಯುವಳು ಮಹಾ ಲಕ್ಷ್ಮೀ, ಸುಖ ಸಂಪತ್ತು ಹೆಚ್ಚುವ ದಿನ ಯಾರು ಈ ನಟಿ? ಬಾಲಿವುಡ್ ನಟಿ ದಿಯಾ ಮಿರ್ಜಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆಡಿರುವ ಮಾತುಗಳಿವು. ದಿಯಾ ಮಿರ್ಜಾ ಅಂದರೆ ಸೌಂದರ್ಯ, ಶಿಸ್ತು ಮತ್ತು ಕಾಳಜಿಯ ಎರಕ ಅನ್ನೋ ಮಾತಿದೆ. ಬೆಳ್ಳಿತೆರೆಯ ಗ್ಲಾಮರ್ ಲೋಕದಲ್ಲಿದ್ದುಕೊಂಡೇ, ಪರಿಸರ ಮತ್ತು ಸಮಾಜದ ಕುರಿತು ತುಡಿಯುವ ಸ್ಫೂರ್ತಿದಾಯಕ ವ್ಯಕ್ತಿತ್ವದ ಮೂಲಕ ಗಮನಸೆಳೆದವರು. 2000ರಲ್ಲಿ 'ಮಿಸ್ ಏಷ್ಯಾ ಪೆಸಿಫಿಕ್' ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ಭಾರತದ ಹಿರಿಮೆ ಹೆಚ್ಚಿಸಿದ ದಿಯಾ, ನಂತರ 'ರೆಹ್ನಾ ಹೈ ತೇರೆ ದಿಲ್ ಮೇ' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಅದರಲ್ಲಿನ 'ರೀನಾ' ಪಾತ್ರ ಅವರಿಗೆ ಸಿಕ್ಕಾಪಟ್ಟೆ ಹೆಸರು ತಂದುಕೊಟ್ಟಿತ್ತು. ಪರಿಸರ ಸ್ನೇಹಿ ಕಾಳಜಿ ಚಿತ್ರರಂಗದ ಜೊತೆಗೆ ದಿಯಾ ನಿಷ್ಠಾವಂತ ಪರಿಸರ ಪ್ರೇಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿ ಅಂದರೆ ಗುಡ್‌ವಿಲ್ ಅಂಬಾಸಿಡರ್ ಆಗಿ ಸುಸ್ಥಿರ ಜೀವನಶೈಲಿಯ ಜಾಗೃತಿ ಮೂಡಿಸುತ್ತಿದ್ದಾರೆ. ಪ್ಲಾಸ್ಟಿಕ್ ಮುಕ್ತ ಪರಿಸರ, ಹವಾಮಾನ ವೈಪರೀತ್ಯಗಳ ಬಗ್ಗೆ ದನಿ ಎತ್ತುತ್ತಿರುತ್ತಾರೆ. ಎಲಿಫೆಂಟ್ ಕಾರಿಡಾರ್ ಯೋಜನೆಗಳಲ್ಲಿ ಸಕ್ರಿಯವಾಗಿದ್ದಾರೆ. ಇವರ ಮದುವೆಯೂ ವಿಶಿಷ್ಟವಾಗಿತ್ತು ಮದುವೆಯಲ್ಲಿ ಪರಿಸರ ಸ್ನೇಹಿ ಅಲಂಕಾರ ಬಳಸಿ, ಕನ್ಯಾದಾನದಂಥ ಪುರುಷಪ್ರಧಾನ ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟು ಮಹಿಳಾ ಪಂಡಿತರ ಮೂಲಕ ವಿವಾಹವಾದವರು. ಈಗ ಮಗುವಿನ ತಾಯಿಯೂ ಆಗಿದ್ದಾರೆ. . ನೂರಾರು ಜನರ ಮುಂದೆ ತುಂಡುಬಟ್ಟೆಯಲ್ಲಿ ಕುಣಿದಾಗ ಆತ್ಮವಿಶ್ವಾಸ ಹೆಚ್ಚಿತಂತೆ ದಿಯಾ ಮಿರ್ಜಾ 2004 ರ 'ತುಮ್ಸಾ ನಹಿ ದೇಖಾ' ಚಿತ್ರದ 'ಮುಝೆ ತುಮ್ಸೆ ಮೊಹಬ್ಬತ್ ಹೈ' ಹಾಡಿನ ಚಿತ್ರೀಕರಣದ ನೆನಪುಗಳನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ. ನೂರಾರು ಜನರ ಮುಂದೆ ತುಂಡು ಉಡುಪಿನಲ್ಲಿ ನಟಿಸಬೇಕಾಗಿ ಬಂದ ಆ ಅನುಭವ ತಮ್ಮಲ್ಲಿ ಹೇಗೆ ಹೊಸ ಆತ್ಮವಿಶ್ವಾಸ ಮೂಡಿಸಿತು ಎಂಬುದನ್ನು ಅವರು ವಿವರಿಸಿದ್ದಾರೆ. ʼಆ ಘಟನೆ ನನ್ನನ್ನು ನಾನು ಎಂದೂ ಊಹಿಸದ ರೀತಿಯಲ್ಲಿ ಮುಕ್ತಗೊಳಿಸಿತು. ಆ ಹಾಡಿನಲ್ಲಿ ನನಗೆ ಅಷ್ಟು ಆತ್ಮವಿಶ್ವಾಸದಿಂದ ನಟಿಸಲು ಸಾಧ್ಯವಾಗಿದ್ದಕ್ಕೆ ಕೊರಿಯೋಗ್ರಾಫರ್ ವೈಭವಿ ಮರ್ಚೆಂಟ್ ಹಾಗೂ ಸೆಟ್‌ನಲ್ಲಿದ್ದ ತಂಡವೇ ಕಾರಣ. ಅವರೆಲ್ಲರೂ ನನ್ನಲ್ಲಿ ಸುರಕ್ಷತಾ ಭಾವನೆ ಮೂಡುವಂತೆ ಮಾಡಿದರುʼ ಎಂದಿದ್ದಾರೆ. Recommended for you 4 ರಾಜಯೋಗದಿಂದ ಬೆಳಗುವುದು 5 ರಾಶಿಯವರ ಭಾಗ್ಯ: ಶ್ರಾವಣ ಪೂರ್ತಿ ಇವರ ಮೇಲಿರಲಿದೆ ಶಿವನ ಕೃಪೆ ಕಷ್ಟಕರ ಕೆಲಸವೂ ಹೌದು ʼ ಒಬ್ಬ ಹುಡುಗಿಯಾಗಿ ಅದು ನಾನು ಮಾಡಿದ ಅತ್ಯಂತ ಕಷ್ಟದ ಕೆಲಸಗಳಲ್ಲಿ ಒಂದಾಗಿತ್ತು. ಏಕೆಂದರೆ ಸೆಟ್‌ನಲ್ಲಿದ್ದ ನೂರಾರು ಪುರುಷರ ಮುಂದೆ ನಾನು ಕೇವಲ ಒಳಉಡುಪಿನಲ್ಲಿ ನಟಿಸಬೇಕಿತ್ತು. ನನ್ನ ಪಾತ್ರಕ್ಕೆ ಅದು ಎಷ್ಟು ಅಗತ್ಯವಾಗಿತ್ತು ಎಂಬುದನ್ನು ಅರ್ಥಮಾಡಿಕೊಂಡಿದ್ದರಿಂದಲೇ ನಾನು ಅದಕ್ಕೆ ಒಪ್ಪಿಕೊಂಡೆʼ ಎಂದು ಹೇಳಿದ್ದಾರೆ. ಚಿತ್ರೀಕರಣದ ವೇಳೆಗೆ ತನಗೆ ಪಾತ್ರದ ಸ್ಪಷ್ಟತೆ ಇತ್ತು ಎಂದು ಹೇಳಿದ ದಿಯಾ, ʼಪಾತ್ರಕ್ಕೆ ತಕ್ಕಂತೆ ಬದುಕುವುದು ಎಷ್ಟು ಮುಖ್ಯ ಎಂಬುದು ಆ ಹೊತ್ತಿಗಾಗಲೇ ನನಗೆ ಅರ್ಥವಾಗಿತ್ತು. ಹೀಗಾಗಿ ಅಲ್ಲಿ 500 ಜನರಿದ್ದರೋ ಅಥವಾ 1,000 ಜನರಿದ್ದರೋ ಎನ್ನುವುದು ನನಗೆ ವಿಷಯವೇ ಆಗಲಿಲ್ಲʼ ಎಂದೂ ಹೇಳಿದ್ದಾರೆ. ಭಯ ಮುಜುಗರ ಮೆಟ್ಟಿ ನಿಂತೆ ತನ್ನ 25 ವರ್ಷಗಳ ಸುದೀರ್ಘ ಸಿನಿಪಯಣದ ಬಗ್ಗೆ ಮಾತನಾಡುತ್ತಾ, ʼನನ್ನ ವೃತ್ತಿಜೀವನದ ಆರಂಭಿಕ ದಿನಗಳ ಇಂತಹ ಅನುಭವಗಳೇ ಇವತ್ತು ನನ್ನನ್ನು ಒಬ್ಬ ಪರಿಪೂರ್ಣ ಕಲಾವಿದೆಯಾಗಿ ರೂಪಿಸಿವೆ. ನನ್ನೊಳಗಿನ ಭಯ ಮತ್ತು ಮುಜುಗರವನ್ನು ಮೆಟ್ಟಿ ನಿಂತಿದ್ದರಿಂದಲೇ ಇಂದು ನನ್ನ ಪಾತ್ರಗಳಿಗೆ ಜೀವ ತುಂಬಲು ಸಾಧ್ಯವಾಗುತ್ತಿದೆ. ಕಲಿಯುವುದು ಮತ್ತು ನಮ್ಮನ್ನು ನಾವು ತಿದ್ದುಕೊಳ್ಳುವುದು ನಿರಂತರ ಪ್ರಕ್ರಿಯೆ. ಮುಂದೆಯೂ ನಾನು ಉತ್ತಮ ಕಲಾವಿದೆಯಾಗಿ ಬೆಳೆಯುತ್ತೇನೆ ಎಂಬ ಭರವಸೆಯಿದೆʼ ಎಂದಿದ್ದಾರೆ. ಅನುರಾಗ್ ಬಸು ನಿರ್ದೇಶನದ ಹಾಗೂ ಮುಕೇಶ್ ಭಟ್ ನಿರ್ಮಾಣದ 'ತುಮ್ಸಾ ನಹಿ ದೇಖಾ - ಎ ಲವ್ ಸ್ಟೋರಿ' ಚಿತ್ರವು ಹಾಲಿವುಡ್‌ನ 'ಪ್ರಿಟಿ ವುಮನ್' ಸಿನಿಮಾದಿಂದ ಪ್ರೇರಿತವಾಗಿತ್ತು. ಬಾರ್ ಡ್ಯಾನ್ಸರ್ ಒಬ್ಬಳನ್ನು ಪ್ರೀತಿಸುವ ಶ್ರೀಮಂತ ಯುವಕನ ಕಥೆಯನ್ನು ಹೊಂದಿದ್ದ ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಮತ್ತು ದಿಯಾ ಮಿರ್ಜಾ ಜೊತೆಗೆ ಅನುಪಮ್ ಖೇರ್ ಹಾಗೂ ಪೂಜಾ ಭಾರತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.













Comments