ರಶ್ಮಿಕಾ ಪೋಸ್ಟ್ಗೆ ಯಶ್ ಅಭಿಮಾನಿಗಳ ಆಕ್ರೋಶ
ಕನ್ನಡಿಗರ ಹಾಗೂ ಯಶ್ ಅಭಿಮಾನಿಗಳ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಬಿಡುಗಡೆಯಾಗಿ ಕರ್ನಾಟಕವೂ ಸೇರಿದಂತೆ ವಿವಿಧ ಭಾಗಗಳಲ್ಲಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾಗೆ ಸಂಬಂಧಿಸಿದಂತೆ ಸಿನಿ ಪ್ರೇಮಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಸಿನಿಮಾದ ಮೇಕಿಂಗ್ ಹಾಗೂ ಅದ್ಧೂರಿ ತಾರಾಗಣ ಸೇರಿದಂತೆ ಹಲವು ಕಾರಣಗಳಿಗೆ ಟಾಕ್ಸಿಕ್ ಸದ್ದು ಮಾಡುತ್ತಿದೆ. ಈ ಹಿಂದೆ ನಟ ಯಶ್ ಅವರು "ಶೋ ಮ್ಯಾನ್" ಎಂದಿದ್ದ ನಟಿ ರಶ್ಮಿಕಾ ಮಂದಣ್ಣ ಅವರು ಮತ್ತೊಂದು ಕಾರಣಕ್ಕೆ ಕನ್ನಡಿಗರು ಹಾಗೂ ಯಶ್ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದೇಶದಾದ್ಯಂತ ಟಾಕ್ಸಿಕ್ ಸಿನಿಮಾ ಸದ್ದು ಮಾಡುತ್ತಿದೆ. ಈ ರೀತಿ ಇರುವಾಗಲೇ ನೆರೆಯ ತೆಲುಗು ಇಂಡಸ್ಟ್ರಿಯಲ್ಲಿ ಟಾಕ್ಸಿಕ್ ಸಿನಿಮಾವನ್ನು ಕೆಲವರು ಉದ್ದೇಶಪೂರ್ವಕವಾಗಿ ನೆಗೆಟಿವ್ ಮಾಡುತ್ತಿದ್ದಾರೆ ಎನ್ನುವ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ಇದಕ್ಕೆ ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಟಾಲಿವುಡ್‌ನ ಹಲವು ನಟ - ನಟಿಯರು ಧ್ವನಿ ಗೂಡಿಸಿರುವುದು ಸಹ ಚರ್ಚೆಗೆ ಕಾರಣವಾಗಿದೆ. ತೆಲುಗು ಭಾಷೆಯಲ್ಲಿ ನಟ ರವಿತೇಜ ಅವರು ಅಭಿನಯಿಸಿರುವ ಇರುಮುಡಿ ಸಿನಿಮಾ ಬಿಡುಗಡೆಯಾಗಿದೆ. ಇರುಮುಡಿ ಹಾಗೂ ಟಾಕ್ಸಿಕ್ ಸಿನಿಮಾದ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಇದೀಗ ತೆಲುಗು ಭಾಷೆಯ ಹಲವು ನಟ - ನಟಿಯರು ಇರುಮುಡಿ ಸಿನಿಮಾ ಬೆಂಬಲಕ್ಕೆ ನಿಂತಿದ್ದಾರೆ. ಹಿಂದೊಮ್ಮೆ ಯಶ್ ಶೋ ಮ್ಯಾನ್ ಎಂದಿದ್ದ ನಟಿ ರಶ್ಮಿಕಾ ಮಂದಣ್ಣ ಅವರು ಸಹ ಈ ಸಿನಿಮಾದ ಬೆಂಬಲಕ್ಕೆ ನಿಂತಿದ್ದು, ಪರೋಕ್ಷವಾಗಿ ಟಾಕ್ಸಿಕ್ ಸಿನಿಮಾಗೆ ಟಾಂಗ್ ಕೊಟ್ಟಂತೆ ಇದೆ. Also Read Yash Toxic: ಟಾಕ್ಸಿಕ್ ಬಗ್ಗೆ ಯಶ್ ತಾಯಿ ಪುಷ್ಪಾ ಹೇಳಿದ್ದೇನು, ನೆಗೆಟಿವ್ ಪ್ರಚಾರಕ್ಕೆ ಖಡಕ್ ಪ್ರತಿಕ್ರಿಯೆ Rashmika Mandanna: ನಟಿ ರಶ್ಮಿಕಾ ಮಂದಣ್ಣ ಟ್ವೀಟ್ ನಿನ್ನೆ ನನಗೆ ಇರುಮುಡಿ ಸಿನಿಮಾ ನೋಡುವ ನೋಡುವ ಅವಕಾಶ ಸಿಕ್ಕಿತು.. ❤️ ಎಂತಹ ಸುಂದರ ಚಿತ್ರ ಅದು.. ❤️ ನಾನು ಊಹಿಸದ ರೀತಿಯಲ್ಲಿ ಅದು ನನ್ನ ಮನ ಮುಟ್ಟಿತು ಅಂತ ನಟಿ ರಶ್ಮಿಕಾ ಮಂದಣ್ಣ ಅವರು ಹೇಳಿದ್ದಾರೆ. ಸಾಮಾನ್ಯವಾಗಿ ನಾವು ಸಣ್ಣ ಊರುಗಳಲ್ಲಿ ಬೆಳೆದಾಗ, ನಮಗೆ ಏನಾದರೂ ಸಮಸ್ಯೆಯಾದರೆ ಅಥವಾ ಯಾವುದಾದರೂ ವಿಷಯ ನಮ್ಮನ್ನು ಕಾಡಿದರೆ, ಮೊದಲು ಮನೆಯ ಹಿರಿಯರ ಬಳಿ ಹೋಗಿ ಹೇಳುತ್ತೇವೆ. ಅದು ನಮ್ಮಲ್ಲಿರುವ ಮುಗ್ಧತೆಯಿಂದ. ಆದರೆ ನಂತರ ವಾಸ್ತವದ ಅರಿವಾಗುತ್ತದೆ. ಏನೇ ನಡೆದರೂ ಸುಮ್ಮನಿರಬೇಕು ಎಂದು ನಮಗೆ ಹೇಳಲಾಗುತ್ತದೆ ಎಂದೂ ಅವರು ಹೇಳಿದ್ದಾರೆ. ಅಲ್ಲದೆ ಈ ಸಿನಿಮಾ ನಿಜಕ್ಕೂ ಒಂದು ಅದ್ಭುತ ಅನುಭವ. ಮಾತನಾಡಬೇಕಾದ ಒಂದು ಪ್ರಮುಖ ವಿಷಯವನ್ನು ಸಿನಿಮಾ ಮೂಲಕ ಬಹಳ ಚೆನ್ನಾಗಿ ತೋರಿಸಲಾಗಿದೆ. ರವಿತೇಜಾ ಸರ್, ಈ ಯಶಸ್ಸಿಗೆ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ನಕ್ಷತ್ರಾ, ನೀವು ಈ ಸಿನಿಮಾದಲ್ಲಿ ನಿಜಕ್ಕೂ ಸೂರ್ಯಕಿರಣದಂತೆ ಇದ್ದಿರಿ. Recommended For You Yash Toxic: ಟಾಕ್ಸಿಕ್ ಸಿನಿಮಾ ಬಿಡುಗಡೆ: ವಿಶೇಷ ಮನವಿ ಮಾಡಿದ ರಾಕಿಂಗ್ ಸ್ಟಾರ್ ಯಶ್, ಪೋಸ್ಟ್‌ನಲ್ಲಿ ಏನಿದೆ ? ನಿಮ್ಮ ನಗು ನನ್ನ ಮುಖದಲ್ಲೂ ನಗು ಮೂಡಿಸಿತು. ಅಭಿನಂದನೆಗಳು ಪುಟ್ಟಿ. ಶಿವ ಅವರ ನಿರ್ವಾಣದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಈ ಯಶಸ್ಸಿಗೆ ನೀವು ಸಂಪೂರ್ಣವಾಗಿ ಅರ್ಹರು. ನಿಮಗಾಗಿ ತುಂಬಾ ಸಂತೋಷವಾಗಿದೆ. ಈ ಸುಂದರ ಸಿನಿಮಾವನ್ನು ನೀಡಿದ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು ಇಂತಹ ಒಂದು ಅದ್ಭುತ ಸಿನಿಮಾವನ್ನು ಮಾಡಿದ್ದಕ್ಕಾಗಿ ಧನ್ಯವಾದಗಳು ಅಂತಲೂ ನಟಿ ರಶ್ಮಿಕಾ ಮಂದಣ್ಣ ಅವರು ಹೇಳಿದ್ದಾರೆ. ಇದರೊಂದಿಗೆ ನಟ ವಿಜಯ ದೇವರಕೊಂಡ ಸೇರಿದಂತೆ ಹಲವು ತೆಲುಗು ನಟರು ದಿಢೀರ್ ಎಂದು ಇರುಮುಡಿ ಸಿನಿಮಾಗೆ ಬೆಂಬಲ ಸೂಚಿಸುತ್ತಿದ್ದಾರೆ. ನಟ ವಿಜಯ್ ದೇವರಕೊಂಡ ಅವರು, ತೆಲುಗು ಸಿನಿಮಾ ಮಂದಿರಗಳಲ್ಲಿ ಎಂತಹ ಅದ್ಭುತ ವಾತಾವರಣ. ರವಿತೇಜ ಅಣ್ಣ ಮತ್ತು ನನ್ನ ಪ್ರೀತಿಯ ಶಿವನಿರ್ವಾಣ ಅವರು ತೆಲುಗು ರಾಜ್ಯಗಳಾದ್ಯಂತ ಸಂಭ್ರಮಾಚರಣೆಯನ್ನು ಸೃಷ್ಟಿಸಿದ್ದಾರೆ. ಇರುಮುಡಿಯನ್ನು ಆಕರ್ಷಕ ಕಥೆ ಇದೆ ಮತ್ತು ಉತ್ತಮ ಸಂದೇಶಕ್ಕಾಗಿ ನೋಡಲೇಬೇಕು ಎಂದಿದ್ದಾರೆ. ಈ ಸಿನಿಮಾ ಬಿಡುಗಡೆಯಾಗಿದ್ದು ಆಗಸ್ಟ್ 21ರಂದು ಆದರೆ, ತೆಲುಗು ನಟ - ನಟಿಯರು ಟಾಕ್ಸಿಕ್ ಸಿನಿಮಾ ಬಿಡುಗಡೆಯಾದ ಮೇಲೆ ಈ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಟ್ವೀಟ್ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.














Comments