• Feb 03, 2026
  • NPN Log
    ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರಸ್ತಕ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಗಳು(UGCET-2026) ಮುಂದಿನ ಏಪ್ರಿಲ್ 23 ಮತ್ತು 24ರಂದು ನಡೆಯಲಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೇಳಾಪಟ್ಟಿ ಪ್ರಕಟಿಸಿದೆ. ಅದರೊಂದಿಗೆ ಇತರ ಪರೀಕ್ಷೆಗಳ ದಿನಾಂಕ, ಮಾಹಿತಿಗಳನ್ನು ನೀಡಿದೆ. ಸಿಇಟಿ ವಿಷಯ, ಸಮಯದ ವಿವರ ಇಲ್ಲಿದೆ. ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಗಳನ್ನು ಬೆಂಗಳೂರು, ಬೆಳಗಾವಿ, ವಿಜಯಪುರ ಹಾಗೂ ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ನಡೆಸಲು ಕೆಇಎ ನಿರ್ಧರಿಸಿದೆ. ಈ ಪರೀಕ್ಷೆ 22-04-2026ರಂದು ಬುಧವಾರ ಬೆಳಗ್ಗೆ 10.30ರಿಂದ 11.30ರವರೆಗೆ (ನಾಲ್ಕನೇ ತರಗತಿ ಮಟ್ಟದ-50) ನಡೆಯಲಿದೆ. ವೈದ್ಯಕೀಯ ಸೀಟು ಹಂಚಿಕೆ" ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು 2026 ಏಪ್ರಿಲ್ 23ರಂದು ಗುರುವಾರ ಎರಡು ಪರೀಕ್ಷೆಗಳು ನಡೆಯಲಿವೆ. ಅದರಲ್ಲಿ ಬೆಳಗ್ಗೆ 10.30 ಗಂಟೆಯಿಂದ 11.50ರವರೆಗೆ ಭೌತಶಾಸ್ತ್ರ (60 ಅಂಕಗಳು), ಅದೇ ದಿನ ಮಧ್ಯಾಹ್ನ 2.30ರಿಂದ 3.50ರವರೆಗೆ ರಸಾಯನಶಾಸ್ತ್ರ (60 ಅಂಕಗಳು) ಪರೀಕ್ಷೆಗಳು ಜುರುಗಲಿವೆ. 2026 ಏಪ್ರಿಲ್ 24ರಂದು ಶುಕ್ರವಾರ ಬೆಳಗ್ಗೆ 10.30ರಿಂದ 11.50ಗಂಟೆವರೆಗೆ ಗಣಿತಶಾಸ್ತ್ರ (60 ಅಂಕಗಳು) ಹಾಗೂ ಅದೇ ದಿನ ಮಧ್ಯಾಹ್ನ 2.30ರಿಂದ 3.50ರವರೆಗೆ ಜೀವಶಾಸ್ತ್ರ (60 ಅಂಕಗಳು) ಪರೀಕ್ಷೆಗಳು ನಡೆಯಲಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಇಷ್ಟು ಮಾತ್ರವಲ್ಲದೇ 2026ನೇ ಸಾಲಿನಲ್ಲಿ ಯಾವೆಲ್ಲ ವೃತ್ತಿಪರ ಕೋರ್ಸ್‌ಗಳಿಗೆ ಸಂಬಂಧಿಸಿದ ಪರೀಕ್ಷೆ, ಪ್ರವೇಶ ನಡೆಯುತ್ತವೆ ಎಂಬುದನ್ನು ತಿಳಿಸಿದೆ. 2026ರಲ್ಲಿ ನಡೆಯಲಿರುವ ಕೆಲ ಪರೀಕ್ಷೆಗಳ ವೇಳಾಪಟ್ಟಿ 1. ಮಾರ್ಚ್ 01ರಂದು 6ನೇ ತರಗತಿಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ (KREIS)ಗೆ ಪ್ರವೇಶ ನಡೆಯಲಿದೆ. Recommended For You "SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆ; ನವೀಕರಣಗೊಳ್ಳದ ಪ್ರೌಢ ಶಾಲೆಗಳಿಗೆ ಸಂಕಷ್ಟ" Advertisement 2. ಮೇ 14ರಂದು ಎಂಬಿಎ, ಎಂಸಿಎ ಕೋರ್ಸ್‌ಗಳ ಅಭ್ಯರ್ಥಿಗಳಿಗೆ ಪಿಜಿಸಿಇಟಿ 2026 (PGCET 2026) ಪರೀಕ್ಷೆ 3. ಮೇ 23ರಂದು ಎಂಇ, ಎಂಟೆಕ್ ಸೇರಿ ವಿವಿಧ ಕೋರ್ಸ್‌ಗಳಿಗಾಗಿ ಪಿಜಿಸಿಇಟಿ 2026 (PGCET 2026) ಪರೀಕ್ಷೆ 4. ಮೇ 23ರಂದು ಬಿ.ಇ./ಬಿ.ಟಿಕ್ ಪದವಿ ಕೋರ್ಸ್‌ಗಳ ಅಭ್ಯರ್ಥಿಗಳಿಗೆ 2ನೇ ವರ್ಷಕ್ಕೆ ಲ್ಯಾಟರಲ್ ಪ್ರವೇಶ ಪರೀಕ್ಷೆ You May Also Like "CET Exam 2026: ಸಿಇಟಿ 2026 ದಿನಾಂಕ ಪ್ರಕಟ, ಏಪ್ರಿಲ್ ತಿಂಗಳಲ್ಲಿ ಪರೀಕ್ಷೆಗೆ ಮುಹೂರ್ತ" 5. ಜುಲೈ 18ರಂದು ಎಂಎಸ್‌ಸಿ ನರ್ಸಿಂಗ್, ಎಂಪಿಟಿ, ಎಂಎಸ್‌ಸಿ ಎಎಚ್‌ಎಸ್ ಕೋರ್ಸ್‌ಗಳ ಪರೀಕ್ಷೆ 6. ಅಕ್ಟೊಬರ್‌ 11ಕ್ಕೆ ಕರ್ನಾಟಕ ರಾಜ್ಯ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ 2026 (KSET 2026) ನಡೆಯಲಿದೆ. 7. ನವೆಂಬರ್ 21ರಂದು ಎಂ-ಫಾರ್ಮಾ, ಡಿ-ಫಾರ್ಮಾಗೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಕೆಇಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜನವರಿ 17ರಿಂದ ಅರ್ಜಿ ಸಲ್ಲಿಕೆ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಅವರು ಯುಜಿಸೆಟ್ (UGCET-2026) ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಂಬಂಧಿಸಿದ 2026ನೇ ಸಾಲಿನ ಸಿಇಟಿ ಪ್ರಕ್ರಿಯೆಗೆ ಇಂದು ಚಾಲನೆ ನೀಡಿದರು. ವಿವಿಧ ಮೇಲಿನ ಪರೀಕ್ಷೆಗಳ ವೇಳಾಪಟ್ಟಿಯನ್ನೂ ಪ್ರಕಟಿಸಿದರು. ಪಿಜಿಸಿಇಟಿ, ಡಿಸಿಇಟಿ ಪರೀಕ್ಷೆಗಳ ವೇಳಾಪಟ್ಟಿ ಬಗೆಗಿನ ಮಾಹಿತಿ ಹಂಚಿಕೊಂಡರು. ಪ್ರಸಕ್ತ ಸಾಲಿನ 2026 ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆ (UGCET 2026) ಯನ್ನು ಏಪ್ರಿಲ್ 23 ಮತ್ತು 24ರಂದು ನಡೆಸಲಾಗುವುದು ಎಂದು ಸಚಿವರು ಘೋಷಿಸಿದರು. ಹೊರನಾಡು ಮತ್ತು ಗಡಿ ನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಏಪ್ರಿಲ್ 22ರಂದು ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆ ಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜನವರಿ 17ರಿಂದಲೇ ಆರಂಭವಾಗಲಿದೆ ಎಂದರು. ಈ ಸಂದರ್ಭದಲ್ಲಿ 2026ನೇ ಸಾಲಿನ ಸಿಇಟಿ ಕುರಿತು ಮಾಹಿತಿ ನೀಡುವ ಸಿಇಟಿ ದಿಕ್ಸೂಚಿ ಕಿರು ಹೊತ್ತಿಗೆಯನ್ನು ಸಚಿವರು ಬಿಡುಗಡೆ ಮಾಡಿದರು. ಶುಲ್ಕ ನಿಯಂತ್ರಣ ಸಮಿತಿ ಹಾಗೂ ಪ್ರವೇಶ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರ ನೂತನ ಕೊಠಡಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion