• Sep 11, 2026
  • NPN Log
    ಅಮೆರಿಕದ ಸೈನಿಕರನ್ನು ಹೀರೋಗಳ ಥರ ವಿಜೃಂಭಿಸುವ ಹಾಲಿವುಡ್ ಸಿನಿಮಾಗಳನ್ನು ನೀವು ನೋಡಿರಬಹುದು. ಆದರೆ ಅವರೂ ನಮ್ಮ ನಿಮ್ಮ ಹಾಗೇ ಮನುಷ್ಯರು. ವರ್ಷಗಟ್ಟಲೆ ಲೈಂಗಿಕ ಸುಖದಿಂದ ವಂಚಿತರಾದ ಅವರು ಅದಕ್ಕೆ ಅವಕಾಶ ಸಿಕ್ಕರೆ ಬರಗೆಟ್ಟವರಂತೆ ವರ್ತಿಸುತ್ತಾರೆ. ಸ್ವಲ್ಪ ಹೆಚ್ಚೇ ಆತುರಗೇಡಿಗಳಾಗುತ್ತಾರೆ. ಅದರಿಂದ ಅಪಾಯವೂ ಇದೆ. Bengaluru Rent: ಬಾಡಿಗೆ ಮನೆ ಖಾಲಿ ಮಾಡಿದ 30 ದಿನಗಳ ಬಳಿಕ ಅಡ್ವಾನ್ಸ್ ವಾಪಸ್; 2 ತಿಂಗಳ ಬಾಡಿಗೆಗೆ ಹೊಸ ಷರತ್ತು! Hubballi-Rameswaram: ಹುಬ್ಬಳ್ಳಿ, ಮಂಗಳೂರಿನಿಂದ ಚಲಿಸುವ ವಿಶೇಷ ರೈಲುಗಳ ಸೇವೆ ವಿಸ್ತರಣೆ, ವೇಳಾಪಟ್ಟಿ Government Employees: ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌: ‘ಸಂಧ್ಯಾ ಕಿರಣ’ ಯೋಜನೆ ಜಾರಿ; ವರ್ಷಕ್ಕೆ ₹5 ಲಕ್ಷದವರೆಗೆ ಚಿಕಿತ್ಸೆ ಇದೀಗ ಅಂಥದೊಂದು ಬೆಳವಣಿಗೆಯಿಂದ ಥಾಯ್ಲೆಂಡ್‌ ಕಂಗಾಲಾಗಿದೆ. ಅಲ್ಲಿನ ಪ್ರಸಿದ್ಧ ಪ್ರವಾಸಿ ನಗರ ಪಟ್ಟಾಯದಲ್ಲಿ ಕಳೆದ ಕೆಲವು ದಿನಗಳಿಂದ ವಿಚಿತ್ರ ಬೆಳವಣಿಗೆ ನಡೆದಿದೆ. ಒಂದೆಡೆ ನಗರದ ಹೋಟೆಲ್‌ಗಳು, ಬಾರ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಮನರಂಜನಾ ಉದ್ಯಮ ಅಮೆರಿಕದ ಸಾವಿರಾರು ನೌಕಾಪಡೆ ಸಿಬ್ಬಂದಿಯ ಆಗಮನಕ್ಕಾಗಿ ಕಾಯುತ್ತಿದ್ದರೆ, ಮತ್ತೊಂದೆಡೆ ಪೊಲೀಸರು ಲೈಂಗಿಕ ಉದ್ಯಮದ ವಿರುದ್ಧ ದಿಢೀರ್ ಕಾರ್ಯಾಚರಣೆ ಆರಂಭಿಸಿದ್ದಾರೆ. Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಇಳಿಕೆ, ಇಲ್ಲಿದೆ ಸೆಪ್ಟೆಂಬರ್ 02ರ ದರಪಟ್ಟಿ US Army Arrives Thailand: 286 ದಿನ ಸಮುದ್ರದಲ್ಲಿ ಕಳೆದು ಥಾಯ್ಲೆಂಡ್‌ನ ವೇಶ್ಯಾಗೃಹಗಳತ್ತ ಧಾವಿಸುತ್ತಿರುವ 5,000 US ಯೋಧರು 20 ರೂಪಾಯಿಯ ಟಿಫಿನ್‌ನಿಂದ 2.5 ಕೋಟಿ ರೂಪಾಯಿ ಮೌಲ್ಯದ ಸಾಮ್ರಾಜ್ಯ :ಹೊಟೇಲ್‌ ಬ್ಯುಸಿನೆಸ್‌ನಲ್ಲಿ 65 ವರ್ಷದ ಮಹಿಳೆಯ ಸಾಧನೆ ಕಾರಣ ಒಂದೇ. ಅಮೆರಿಕದ ಬೃಹತ್ ವಿಮಾನವಾಹಕ ಯುದ್ಧನೌಕೆ USS Abraham Lincoln ಅಲ್ಲಿನ ಸಮುದ್ರ ತೀರದಲ್ಲಿ ಲಂಗರು ಹಾಕಿದೆ. ಸುಮಾರು 5,000 ಅಮೆರಿಕನ್ ನೌಕಾಸೈನಿಕರು ಮತ್ತು ಮೆರೀನ್ಸ್‌ಗಳನ್ನು ಹೊಂದಿರುವ ಈ ನೌಕೆ ಸೆಪ್ಟೆಂಬರ್ 2ರಂದು ಥಾಯ್ಲೆಂಡ್‌ನ ಲೇಮ್ ಚಾಬಾಂಗ್ ಬಂದರಿಗೆ ಆಗಮಿಸಿದೆ. ಸಿಬ್ಬಂದಿಗೆ ಐದು ದಿನಗಳ ವಿಶ್ರಾಂತಿ. ಅವರಲ್ಲಿ ಸಾವಿರಾರು ಮಂದಿ ಸಮೀಪದ ಪಟ್ಟಾಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. Also Read ಪ್ರಿಸ್ಕೂಲ್‌ಗೆ ಕಟ್ಟುವ ಫೀಸ್‌ನಲ್ಲಿ ಖರೀದಿಸಬಹುದು ಐಶಾರಾಮಿ ಕಾರು : ಅಂಥದ್ದೇನಿದೆ ಇಲ್ಲಿನ ಶಿಕ್ಷಣದಲ್ಲಿ? US Army Arrives Thailand: 286 ದಿನ ಸಮುದ್ರದಲ್ಲಿದ್ದ ಯೋಧರು ಈ ಭೇಟಿಯ ವಿಶೇಷತೆ ಏನೆಂದರೆ, USS Abraham Lincoln ಸಿಬ್ಬಂದಿ ಸುಮಾರು 286 ದಿನಗಳ ದೀರ್ಘ ಕಾಲ ನೆಲದಿಂದ ದೂರದಲ್ಲಿದ್ದ ನಂತರ ನೆಲಕ್ಕೆ ಕಾಲಿಟ್ಟಿದ್ದಾರೆ. ಹಡಗು ಮೂಲತಃ ಬೇರೆ ಕಾರ್ಯಾಚರಣೆಗೆ ಹೊರಟಿದ್ದರೂ ನಂತರ ಮಧ್ಯಪ್ರಾಚ್ಯದ ಸಂಘರ್ಷ ಮತ್ತು ಇರಾನ್ ವಿರುದ್ಧದ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಪ್ರದೇಶಕ್ಕೆ ಕಳುಹಿಸಲಾಯಿತು. India vs Afghanistan T20: ಅಫ್ಘಾನಿಸ್ತಾನ ವಿರುದ್ಧ ಭಾರತ ತಂಡ ಪ್ರಕಟ; 'ವಂಡರ್ ಕಿಡ್' ವೈಭವ್ ಸೂರ್ಯವಂಶಿಗೆ ಸ್ಥಾನ Gaja Kesari Yoga : ಈ ರಾಶಿಯವರಿಗೆ ಗಜಕೇಸರಿ ಯೋಗ : ಹರಿಯುವುದು ಹಣದ ಹೊಳೆ, ರಾಜವೈಭೋಗ Shukra Gochara: ಇಂದಿನಿಂದ ಈ ರಾಶಿಯವರಿಗೆ ಅದೃಷ್ಟ: ಎಲ್ಲದರಲ್ಲೂ ಯಶಸ್ಸು, ಹಣ ಸಂಪತ್ತು ಯೋಗ ತಿಂಗಳುಗಳ ಕಾಲ ಸಮುದ್ರದಲ್ಲೇ ಕಳೆದ ಸಿಬ್ಬಂದಿಗೆ ಈ ಪಟ್ಟಾಯ ಭೇಟಿ ಒಂದು ರೀತಿಯ ವಿಶ್ರಾಂತಿ ಮತ್ತು ಮನರಂಜನೆಯ ಅವಕಾಶವಾಗಿದೆ. ಆದರೆ ಸೈನಿಕರು ಬರುವ ಮುನ್ನ ಪೊಲೀಸರ ದಾಳಿ ಯಾಕೆ? ಲೈಂಗಿಕ ಪ್ರವಾಸೋದ್ಯಮಕ್ಕೆ ಹೆಸರಾದ ಪಟ್ಟಾಯ ಪಟ್ಟಾಯ ಎಂದಾಕ್ಷಣ ಅಲ್ಲಿನ ರಾತ್ರಿ ಜೀವನ, ಲೈಂಗಿಕ ಪ್ರವಾಸೋದ್ಯಮ, ಕ್ಲಬ್‌ಗಳು, ಮಸಾಜ್‌ ಸೆಂಟರ್‌ಗಳು ನೆನಪಾಗಲೇಬೇಕು. ಥಾಯ್ಲೆಂಡ್‌ನಲ್ಲಿ ವೇಶ್ಯಾವಾಟಿಕೆ ಕಾನೂನಿನ ಪ್ರಕಾರ ನಿಷೇಧಿತವಾದರೂ, ಪಟ್ಟಾಯ ಸೇರಿದಂತೆ ಕೆಲವು ಪ್ರವಾಸಿ ಪ್ರದೇಶಗಳಲ್ಲಿ ಈ ಉದ್ಯಮ ಬಹಿರಂಗವಾಗಿಯೇ ಕಾಣಿಸಿಕೊಳ್ಳುತ್ತದೆ. ಸುಮಾರು 5,000 ವಿದೇಶಿ ಸೈನಿಕರು ನಗರಕ್ಕೆ ಬರುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಪೊಲೀಸರು ಗಸ್ತು ಹೆಚ್ಚಿಸಿದರು. ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಅನುಮಾನದಲ್ಲಿ ಹಲವರ ವಿರುದ್ಧ ಕಾರ್ಯಾಚರಣೆ ನಡೆಸಲಾಯಿತು. ಸುಮಾರು ಜನರನ್ನು ವಶಕ್ಕೆ ಪಡೆಯಲಾಗಿದೆ. ಇದರ ಹಿಂದೆ ಕಾನೂನು ಸುವ್ಯವಸ್ಥೆ, ಸಾರ್ವಜನಿಕ ಸುರಕ್ಷತೆ, ಲೈಂಗಿಕ ಶೋಷಣೆ ಮತ್ತು ಆರೋಗ್ಯದ ಅಪಾಯಗಳನ್ನು ನಿಯಂತ್ರಿಸುವುದು ಕೂಡ ಪ್ರಮುಖ ಕಾರಣಗಳಾಗಿವೆ ಎಂದು ಹೇಳಲಾಗಿದೆ. ಪಟ್ಟಾಯಕ್ಕೂ, ಅಮೆರಿಕಕ್ಕೂ ಹಳೆಯ ಸಂಬಂಧ ಪಟ್ಟಾಯಕ್ಕೆ ಅಮೆರಿಕನ್ (america) ಸೈನಿಕರೊಂದಿಗೆ ಹಳೆಯ ಸಂಬಂಧ ಇದೆ. ಪಟ್ಟಾಯ ಒಂದು ಕಾಲದಲ್ಲಿ ಸಣ್ಣ ಮೀನುಗಾರಿಕಾ ಗ್ರಾಮವಾಗಿತ್ತು. ಆದರೆ ವಿಯೆಟ್ನಾಂ ಯುದ್ಧದ ಸಮಯದಲ್ಲಿ ಅಮೆರಿಕನ್ ಸೈನಿಕರು ವಿಶ್ರಾಂತಿಗಾಗಿ ಥಾಯ್ಲೆಂಡ್‌ಗೆ ಬರುತ್ತಿದ್ದಂತೆ ಪಟ್ಟಾಯದ ಪ್ರವಾಸೋದ್ಯಮ ವೇಗವಾಗಿ ಬೆಳೆಯಿತು. ನಂತರ ಈ ನಗರ ಜಾಗತಿಕ ಮಟ್ಟದಲ್ಲಿ ರಾತ್ರಿ ಜೀವನ ಮತ್ತು ಲೈಂಗಿಕ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಯಿತು. ಹೀಗಾಗಿ, ದಶಕಗಳ ನಂತರ ಮತ್ತೆ ಸಾವಿರಾರು ಅಮೆರಿಕನ್ ಸೈನಿಕರ ಆಗಮನ ಪಟ್ಟಾಯದ ಹಳೆಯ ಇತಿಹಾಸವನ್ನು ನೆನಪಿಸುವಂತಾಗಿದೆ. ಎಲ್ಲ ಕಡೆ ನಿಷೇಧವೇ? ಅಮೆರಿಕನ್ ಸಿಬ್ಬಂದಿಗೆ ಪಟ್ಟಾಯದ ಕೆಲವು ಪ್ರದೇಶಗಳಿಗೆ ನಿರ್ಬಂಧ ವಿಧಿಸಲಾಗಿದೆ. ಉದಾಹರಣೆಗೆ Soi 6, Soi 6/1 ಮತ್ತು Soi 7 ಪ್ರದೇಶಗಳಿಗೆ ಹೋಗದಂತೆ ಸೂಚಿಸಲಾಗಿದೆ. ಗಾಂಜಾ ಅಂಗಡಿಗಳು, ಕೆಲವು ಔಷಧ ಅಂಗಡಿಗಳು ಮತ್ತು ಕೆಲವು ಅಪಾಯಕಾರಿ ಚಟುವಟಿಕೆಗಳ ಮೇಲೂ ನಿರ್ಬಂಧವಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಇಲ್ಲಿ ಇನ್ನೊಂದು ವ್ಯಂಗ್ಯವೂ ಇದೆ. ಒಂದೆಡೆ ಪೊಲೀಸರು ಲೈಂಗಿಕ ಉದ್ಯಮವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಪಟ್ಟಾಯದ ವ್ಯಾಪಾರಿಗಳು 5,000 ಅಮೆರಿಕನ್ ಅತಿಥಿಗಳಿಗಾಗಿ ಕಾಯುತ್ತಿದ್ದಾರೆ. ದೀರ್ಘಕಾಲದ ನಂತರ ಹೋಟೆಲ್, ಆಹಾರ (food), ಮನರಂಜನೆ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಈ ಭೇಟಿ ದೊಡ್ಡ ಆರ್ಥಿಕ ಉತ್ತೇಜನ ನೀಡಬಹುದು ಎಂಬ ನಿರೀಕ್ಷೆಯಿದೆ. ಪ್ರತಿಯೊಬ್ಬ ಸಿಬ್ಬಂದಿಯೂ ದಿನಕ್ಕೆ ಸಾವಿರಾರು ಥಾಯ್ ಬಹ್ತ್ ಖರ್ಚು ಮಾಡುವ ಸಾಧ್ಯತೆಯಿದೆ ಎಂದು ಸ್ಥಳೀಯ ಅಧಿಕಾರಿಗಳು ಅಂದಾಜಿಸಿದ್ದಾರೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion