• Apr 13, 2026
  • NPN Log
    ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಇಂಟರ್​ನೆಟ್​​ನಲ್ಲಿ ಅವರು ಆ ಪರಿ ಸೆನ್ಸೇಷನ್ ಸೃಷ್ಟಿ ಮಾಡಿದ್ದರು. ಈಗ ಅವರ ಮದುವೆಯ (Monalisa Bhosle Marriage) ವಿಷಯ ಸಖತ್ ಚರ್ಚೆ ಆಗುತ್ತಿದೆ. ಯಾವುದೇ ಸೂಚನೆ ನೀಡಿದೇ ಸಡನ್ ಆಗಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಸ್ಲಿಂ ಸಮುದಾಯದ ಮೊಹಮ್ಮದ್ ಫರ್ಮಾನ್ ಜೊತೆ ಮೊನಾಲಿಸಾ ಅವರು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಅಷ್ಟಕ್ಕೂ ಈ ಮೊಹಮ್ಮದ್ ಫರ್ಮಾನ್ (Muhammad Farman) ಯಾರು? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರುದ್ರಾಕ್ಷಿ ಮಾಲೆ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಮೊನಾಲಿಸಾ ಭೋಸ್ಲೆ ಅವರಿಗೆ ಚಿತ್ರರಂಗದಿಂದ ಅವಕಾಶ ಸಿಕ್ಕಿದ್ದು ಗೊತ್ತೇ ಇದೆ. ನಟಿಯಾಗಿ ಅವರು ಚಿತ್ರರಂಗಕ್ಕೆ ಎಂಟ್ರಿ ನೀಡಿದ ಬಳಿಕ ಅವರಿಗೆ ಮೊಹಮ್ಮದ್ ಫರ್ಮಾನ್ ಪರಿಚಯ ಆಯಿತು. ಮೊಹಮ್ಮದ್ ಫರ್ಮಾನ್ ಕೂಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ವ್ಯಕ್ತಿ. ಅವರು ನಟನಾಗಿ ಮತ್ತು ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಉತ್ತರ ಪ್ರದೇಶ ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ. ಮೊಹಮ್ಮದ್ ಫರ್ಮಾನ್ ಮತ್ತು ಮೊನಾಲಿಸಾ ಭೋಸ್ಲೆ ನಡುವೆ ಪರಿಚಯ ಬೆಳೆದಿದ್ದು ಸೋಶಿಯಲ್ ಮೀಡಿಯಾ ಮೂಲಕ. ನಂತರ ಅವರು ಶೂಟಿಂಗ್ ಸೆಟ್​​ನಲ್ಲಿ ಭೇಟಿಯಾದರು. ಇಬ್ಬರ ನಡುವೆ ಪ್ರೀತಿ ಬೆಳೆಯಿತು. 6 ತಿಂಗಳ ಕಾಲ ಡೇಟಿಂಗ್ ಮಾಡಿದ ಅವರು ಮದುವೆ ಆಗುವ ನಿರ್ಧಾರಕ್ಕೆ ಬಂದರು. ಬೇರೆ ಬೇರೆ ಧರ್ಮದವರಾದ ಕಾರಣ ಅವರ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ವಿರೋಧದ ನಡುವೆಯೂ ಅವರು ಮದುವೆ ಆಗಿದ್ದಾರೆ. ವಿಶೇಷ ಏನೆಂದರೆ, ಮೊಹಮ್ಮದ್ ಫರ್ಮಾನ್​​ಗೆ ಮೊದಲು ಪ್ರೊಪೋಸ್ ಮಾಡಿದ್ದೇ ಮೊನಾಲಿಸಾ ಭೋಸ್ಲೆ! ಮದುವೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ. ‘ಮೊನಾಲಿನಾ ಪ್ರೊಪೋಸ್ ಮಾಡಿದಳು. ನಾನು ಮೊದಲು ಒಪ್ಪಿಕೊಳ್ಳಲಿಲ್ಲ. ಆಮೇಲೆ ಆಕೆ ನನ್ನ ಮನವೊಲಿಸಿದಳು’ ಎಂದು ಮೊಹಮ್ಮದ್ ಫರ್ಮಾನ್ ಹೇಳಿದ್ದಾರೆ. ಇದನ್ನೂ ಓದಿ: ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ ಮೊನಾಲಿಸಾ ಕಳೆದ 6 ತಿಂಗಳಿಂದ ಮೊನಾಲಿಸಾ ಹಾಗೂ ಮೊಹಮ್ಮದ್ ಫರ್ಮಾನ್ ಪ್ರೀತಿಸುತ್ತಿದ್ದರು. ಅದರ ಬಗ್ಗೆ ಫರ್ಮಾನ್ ಮಾತನಾಡಿದ್ದಾರೆ. ‘ಈ ಆರು ತಿಂಗಳುಗಳು ನಮಗೆ 60 ವರ್ಷದ ಪ್ರೀತಿಯ ಹಾಗೆ ಅನಿಸಿತು. ಆದಕ್ಕಾಗಿಯೇ ನಾವು ಮದುವೆ ಆಗಲು ನಿರ್ಧರಿಸಿದೆವು’ ಎಂದು ಅವರು ಹೇಳಿದ್ದಾರೆ. ಕೇರಳದ ದೇವಸ್ಥಾನವೊಂದರಲ್ಲಿ ಹಿಂದೂ ಧರ್ಮದ ಪ್ರಕಾರ ಈ ಮದುವೆ ನಡೆದಿದೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion