ಮದುವೆಯ ಆರಂಭದಲ್ಲಿ ತಿಂಗಳಿಗೊಮ್ಮೆ ಭೇಟಿಯಾಗುತ್ತಿದ್ದ ನಾಗ ಚೈತನ್ಯ-ಶೋಭಿತಾ
ಹೈದರಾಬಾದ್, ಆ.26: ನಟ ನಾಗ ಚೈತನ್ಯ ಹಾಗೂ ಶೋಭಿತಾ ಧುಳಿಪಾಳ ತಮ್ಮ ಮದುವೆಯ ಮೊದಲ ವರ್ಷದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್ ಕೆಲಸಗಳ ಒತ್ತಡದಿಂದಾಗಿ ಮದುವೆಯಾದ ಆರಂಭದ ದಿನಗಳಲ್ಲಿ ಇಬ್ಬರೂ ಆಗಾಗ್ಗೆ ಭೇಟಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಶೋಭಿತಾ ತಿಳಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ತಿಂಗಳಿಗೆ ಒಮ್ಮೆ ಮಾತ್ರ ಭೇಟಿಯಾಗುತ್ತಿದ್ದೆವು ಎಂದು ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ. ಕೆಲಸದ ಒತ್ತಡದ ನಡುವೆಯೂ ತಮ್ಮ ಸಂಬಂಧವನ್ನು ಸುಂದರವಾಗಿ ಕಾಪಾಡಿಕೊಂಡಿದ್ದೇವೆ ಎಂದು ಶೋಭಿತಾ ಹೇಳಿದ್ದಾರೆ.














Comments