• Sep 11, 2026
  • NPN Log
    ಭಾರತದಾದ್ಯಂತ ಜನಸಾಮಾನ್ಯರ ಮೇಲೆ ಅತ್ಯಂತ ಗಣನೀಯ ಪ್ರಭಾವವನ್ನ ಬೀರಿರುವ 100 ಪ್ರಮುಖ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯನ್ನ ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿದೆ. ಈ ಬಾರಿಯ ಪಟ್ಟಿಯಲ್ಲಿ ಕರುನಾಡಿಗೆ ಅತ್ಯಂತ ಹೆಮ್ಮೆಯ ವಿಚಾರವೆಂದರೆ, ಮೂವರು ಕನ್ನಡಿಗರು ಈ ಪ್ರತಿಷ್ಠಿತ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕರಾವಳಿಯ ಹೆಮ್ಮೆಯ ನಟ ರಿಷಬ್ ಶೆಟ್ಟಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕಂಪು ಪಸರಿಸಿದ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಹಾಗೂ ಖ್ಯಾತ ಬರಹಗಾರ್ತಿ ಮತ್ತು ಅನುವಾದಕಿ ದೀಪಾ ಭಾಸ್ತಿ ಅವರು ಫೋರ್ಬ್ಸ್ ಪಟ್ಟಿಯಲ್ಲಿ ಮಿಂಚಿದ್ದಾರೆ. ಫೋರ್ಬ್ಸ್ ಇಂಡಿಯಾ ಸಂಸ್ಥೆಯು ಕೇವಲ ಹಣಗಳನ್ನ ಮಾತ್ರ ಪರಿಗಣಿಸದೆ, ವ್ಯಕ್ತಿಗಳು ಸಮಾಜದ ಮೇಲೆ ಬೀರಿದ ನಿಜವಾದ ಪ್ರಭಾವವನ್ನ ಅಳೆದು ಈ ಪಟ್ಟಿಯನ್ನ ಸಿದ್ಧಪಡಿಸುತ್ತದೆ. 2025ರ ಜನವರಿ 1ರಿಂದ 2026ರ ಮಾರ್ಚ್ 31ರ ವರೆಗಿನ ಅವಧಿಯನ್ನ ಈ ಪಟ್ಟಿಗೆ ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ಸಿನೆಮಾ, ಒಟಿಟಿ, ಕ್ರೀಡೆ, ಸಂಗೀತ, ದೂರದರ್ಶನ, ಹಾಸ್ಯ, ಕಲೆ, ಪುಸ್ತಕ ಮತ್ತು ಫ್ಯಾಷನ್ ಹೀಗೆ ವಿವಿಧ ರಂಗಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ಸಾಧಕರನ್ನ ಗುರುತಿಸಲಾಗಿದೆ. ಈ ವ್ಯಕ್ತಿಗಳ ಕಾರ್ಯ ವೈಖರಿ ಜನಸಾಮಾನ್ಯರ ಮೇಲೆ ಯಾವ ರೀತಿಯ ಸಕಾರಾತ್ಮಕ ಬದಲಾವಣೆ ಮತ್ತು ಪರಿಣಾಮವನ್ನ ಬೀರಿದೆ ಎಂಬುದನ್ನು ಅವಲೋಕಿಸಿ ಈ ಗೌರವವನ್ನು ನೀಡಲಾಗಿದೆ. ಫೋರ್ಬ್ಸ್ ಪಟ್ಟಿಯಲ್ಲಿರುವ ಏಕೈಕ ಕನ್ನಡಿಗ ನಟ ರಿಷಬ್ ಶೆಟ್ಟಿ ತಮ್ಮ ವಿಶಿಷ್ಟ ಕಥಾಹಂದರ ಮತ್ತು ಅಭಿನಯದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ, ಈ ಬಾರಿಯ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಕನ್ನಡದ ಏಕೈಕ ನಟರಾಗಿದ್ದಾರೆ. ಕರಾವಳಿಯ ಸಂಸ್ಕೃತಿ, ಆಚಾರ-ವಿಚಾರಗಳನ್ನ ಬೆಳ್ಳಿತೆರೆಯ ಮೇಲೆ ಅದ್ಭುತವಾಗಿ ಕಟ್ಟಿಕೊಡುವ ಮೂಲಕ ಅವರು ಕೇವಲ ಕರುನಾಡಿಗೆ ಮಾತ್ರ ಸೀಮಿತವಾಗದೆ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರ ಮೇಲೆ ಅಪಾರ ಪ್ರಭಾವ ಬೀರಿದ್ದಾರೆ. ಅವರ ಈ ಅಪ್ರತಿಮ ಸಿನಿಮಾಯಾನ ಅವರನ್ನ ದೇಶದ ಅಗ್ರಗಣ್ಯ ಪ್ರಭಾವಿಗಳ ಸಾಲಿನಲ್ಲಿ ನಿಲ್ಲಿಸಿದೆ. ಬೂಕರ್ ವಿಜೇತೆ ಬಾನು ಮುಷ್ತಾಕ್: ಎದೆಯ ಹಣತೆ ಕೃತಿಯ ಸಾಧನೆ ಕನ್ನಡ ಸಾಹಿತ್ಯ ಲೋಕದ ಪಾಲಿಗೆ 2025ನೇ ಇಸವಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ವರ್ಷ. ಸಾಹಿತಿ ಬಾನು ಮುಷ್ತಾಕ್ ಅವರ ಎದೆಯ ಹಣತೆ ಕೃತಿಯು ಪ್ರತಿಷ್ಠಿತ ಬೂಕರ್ ಪ್ರಶಸ್ತಿಗೆ ಭಾಜನವಾಗುವ ಮೂಲಕ ಕನ್ನಡ ಭಾಷೆಯ ಸಾಹಿತ್ಯವನ್ನು ಜಾಗತಿಕ ಮಟ್ಟಕ್ಕೆ ತಗೆದುಕೊಂಡು ಹೋದರು. ಸಾಹಿತ್ಯದ ಮೂಲಕ ಓದುಗರ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ ಬಾನು ಮುಷ್ತಾಕ್ ಅವರನ್ನ ಫೋರ್ಬ್ಸ್ ಇಂಡಿಯಾ ಅತ್ಯಂತ ಗೌರವದಿಂದ ಈ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ. ಸಾಹಿತ್ಯ ವಿಭಾಗದಲ್ಲಿ ಭಾರತದ ಪ್ರತಿನಿಧಿಯಾಗಿ ಅವರು ಗುರುತಿಸಿಕೊಂಡಿರುವುದು ನಾಡಿಗೆ ಹೆಮ್ಮೆಯ ಸಂಗತಿ. ದೀಪಾ ಭಾಸ್ತಿ ಅವರ ಅನುವಾದದ ತಾಕತ್ತು ಬಾನು ಮುಷ್ತಾಕ್ ಅವರ ಎದೆಯ ಹಣತೆ ಪುಸ್ತಕವನ್ನ ಇಂಗ್ಲಿಷ್ ಭಾಷೆಗೆ ಅತ್ಯಂತ ಸಮರ್ಥವಾಗಿ ಮತ್ತು ಮೂಲದ ಸೊಗಡು ಎಳ್ಳಷ್ಟೂ ಕಮ್ಮಿಯಾಗದಂತೆ ಅನುವಾದಿಸಿದ ಕೀರ್ತಿ ಪತ್ರಕರ್ತೆ ಹಾಗೂ ಬರಹಗಾರ್ತಿ ದೀಪಾ ಭಾಸ್ತಿ ಅವರಿಗೆ ಸಲ್ಲುತ್ತದೆ. ಒಂದು ಪ್ರಾದೇಶಿಕ ಭಾಷೆಯ ಕೃತಿಯನ್ನ ವಿಶ್ವಮಟ್ಟದ ಓದುಗರಿಗೆ ತಲುಪಿಸುವಲ್ಲಿ ಅನುವಾದಕರ ಪಾತ್ರ ಬಹಳ ಮುಖ್ಯ. ದೀಪಾ ಭಾಸ್ತಿ ಅವರ ಈ ಮಹತ್ವದ ಸಾಹಿತ್ಯಿಕ ಕೊಡುಗೆಯನ್ನು ಪರಿಗಣಿಸಿದ ಫೋರ್ಬ್ಸ್, ಅವರನ್ನೂ ಕೂಡ ಪ್ರಭಾವಿ ಸೆಲೆಬ್ರಿಟಿಗಳ ಟಾಪ್ 100 ಪಟ್ಟಿಯಲ್ಲಿ ಗುರುತಿಸಿದೆ. ಒಟ್ಟಾರೆಯಾಗಿ, ಸಿನಿಮಾ, ಮೂಲ ಸಾಹಿತ್ಯ ಮತ್ತು ಅನುವಾದ ಕ್ಷೇತ್ರಗಳ ಮೂಲಕ ಮೂವರು ಕನ್ನಡಿಗರು ರಾಷ್ಟ್ರಮಟ್ಟದಲ್ಲಿ ಪ್ರಭಾವಶಾಲಿಗಳಾಗಿ ಹೊರಹೊಮ್ಮಿರುವುದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡುವಂತಹ ಸಾಧನೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion