• Sep 11, 2026
  • NPN Log
    ಬೆಂಗಳೂರಿನ ನಮ್ಮ ಮೆಟ್ರೋ ಹಾಗೂ ಮೆಟ್ರೋ ಪ್ರಯಾಣಿಕರ ಬಗ್ಗೆ ನಾರ್ಥಿ ಮಹಿಳೆಯೊಬ್ಬರು ಮೆಚ್ಚುಗೆಯ ಮಾತನಾಡಿದ್ದಾರೆ. ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಕರ ನಾಗರಿಕ ಪ್ರಜ್ಞೆ ಮತ್ತು ಶಿಸ್ತಿನಿಂದ ವರ್ತಿಸುತ್ತಿದ್ದಾರೆ ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಜನ ಅಚ್ಚುಕಟ್ಟಾಗಿ ನಿಯಮ ಪಾಲನೆ ಮಾಡುತ್ತಿದ್ದಾರೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಬೆಂಗಳೂರು ನಗರದ ನಮ್ಮ ಮೆಟ್ರೋದಲ್ಲಿ ಕ್ರಮಬದ್ಧ ಬೋರ್ಡಿಂಗ್‌ನಿಂದ ಹಿಡಿದು ಪ್ರಯಾಣಿಕರು ಮಹಿಳೆಯರಿಗೆ ತಮ್ಮ ಆಸನಗಳನ್ನು ಬಿಟ್ಟುಕೊಡುವ ವರೆಗೂ ಉತ್ತಮ ವ್ಯವಸ್ಥೆ ಇದೆ. ಬೆಂಗಳೂರು ನಗರದಲ್ಲಿ ಮೆಟ್ರೋ ನೆಟ್‌ವರ್ಕ್ ವ್ಯವಸ್ಥೆ ಉತ್ತಮವಾಗಿದೆ. ಬೆಂಗಳೂರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವುದು ಖುಷಿ ಕೊಡುವ ವಿಚಾರ ಎಂದು ಶಬೀನಾ ಮಸೂದ್ ಎನ್ನುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಹೇಳಿದ್ದಾರೆ. ನಮ್ಮ ಮೆಟ್ರೋದ ರೈಲುಗಳನ್ನು ಹತ್ತುವಾಗ ಮತ್ತು ಇಳಿಯುವಾಗ ಪ್ರಯಾಣಿಕರು ವರ್ತಿಸುವ ರೀತಿ ಒಟ್ಟಾರೆ ಪ್ರಯಾಣದ ಅನುಭವವ ಅತ್ಯಂತ ಉತ್ತಮವಾಗಿದೆ. ಬೆಂಗಳೂರು ಮೆಟ್ರೋ ವ್ಯವಸ್ಥೆಯು ಶಿಷ್ಟಾಚಾರ ಮೆಚ್ಚುಗೆಗೆ ಅರ್ಹವಾಗಿದೆ ಎಂದಿದ್ದಾರೆ. ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರನ್ನು ಹೊಗಳಿರುವ ನಾರ್ಥಿ ಮಹಿಳೆ. ಬೆಂಗಳೂರು ಮೆಟ್ರೋದ ಅತ್ಯುತ್ತಮ ಅಥವಾ ವಿಷಯವೆಂದರೆ ಇಲ್ಲಿನ ಜನರು ತುಂಬಾ ಶಿಸ್ತುಬದ್ಧ ರೀತಿಯಲ್ಲಿ ರೈಲು ಹತ್ತುತ್ತಾರೆ ಮತ್ತು ಇಳಿಯುತ್ತಾರೆ. ಮಹಿಳೆಯರನ್ನು ನೋಡಿದ ತಕ್ಷಣ ಅವರು ಅವರಿಗೆ ಆಸನವನ್ನು ಬಿಟ್ಟು ಕೊಡುತ್ತಾರೆ. ನಿಮ್ಮ ಬ್ಯಾಗ್‌ನಲ್ಲಿ ಇರಿಸಲಾಗಿರುವ ವಸ್ತುಗಳ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ, ಏಕೆಂದರೆ ಇಲ್ಲಿ ಪಿಕ್‌ಪಾಕೆಟ್ ಕಳ್ಳತನ ನಡೆಯುವುದಿಲ್ಲ ಎಂದಿದ್ದಾರೆ. ನಮ್ಮ ಮೆಟ್ರೋ ಎಂದು ಜನಪ್ರಿಯವಾಗಿರುವ ಬೆಂಗಳೂರು ಮೆಟ್ರೋದಲ್ಲಿ ನಿತ್ಯವು ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ನಗರದ ವಿವಿಧ ಭಾಗಗಳಲ್ಲಿ ಪ್ರಯಾಣಿಸುವ ಜನರಿಗೆ ಪ್ರಮುಖ ಸಾರಿಗೆ ಇದಾಗಿದೆ ಎಂದು ಹೇಳಿದ್ದಾರೆ. Also Read Bengaluru Metro: ಬೆಂಗಳೂರು ನಮ್ಮ ಮೆಟ್ರೋ ಹೊಸೂರಿಗೆ ವಿಸ್ತರಣೆ ? ಕೇಂದ್ರದೊಂದಿಗೆ ಚರ್ಚೆ ಆರಂಭಿಸಿದ ತಮಿಳುನಾಡು ಸರ್ಕಾರ Bengaluru Metro: ನೆಟ್ಟಿಗರು ಹೇಳಿದ್ದೇನು ಇನ್ನು ಈ ವೈರಲ್ ವಿಡಿಯೋಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ನೀವು ಬೆಂಗಳೂರಿಗೆ ಹೊಸಬರಿರಬೇಕು, ಬೆಂಗಳೂರಿನಲ್ಲಿ ಇದೆಲ್ಲವೂ ಸಾಮಾನ್ಯ ಸಂಗತಿಯಾಗಿದೆ. ಕರ್ನಾಟಕ ಹಾಗೂ ದಕ್ಷಿಣ ಭಾರತದಲ್ಲಿ ಇದೆಲ್ಲವು ಸಾಮಾನ್ಯ ಸಂಗತಿ ಆಗಿದೆ. ದಕ್ಷಿಣ ಭಾರತದಲ್ಲಿ ಜನರು ಸಭ್ಯವಾಗಿ ವರ್ತಿಸುತ್ತಾರೆ. ಅದರಲ್ಲೂ ಸಾರ್ವಜನಿಕ ಪ್ರದೇಶಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದು ಜನರಿಗೆ ತಿಳಿದಿದೆ. ಉತ್ತರ ಭಾರತಕ್ಕೆ ಹೋಲಿಕೆ ಮಾಡಿದರೆ ದಕ್ಷಿಣ ಭಾರತದ ಮೆಟ್ರೋ ಹಾಗೂ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಜನ ಸಭ್ಯ ರೀತಿಯಲ್ಲಿ ವರ್ತಿಸುತ್ತಾರೆ ಎಂದೂ ಹಲವರು ಹೇಳಿದ್ದಾರೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion