ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಗುಡ್ನ್ಯೂಸ್: KEAಯಿಂದ ಬೃಹತ್ ನೇಮಕಾತಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( KEA) ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ನೇರ ನೇಮಕಾತಿ ಮಾಡಿಕೊಳ್ಳಲು ಇದೇ ತಿಂಗಳು ಅಧಿಸೂಚನೆ ಹೊರಡಿಸಲಿದೆ. ಕರ್ನಾಟಕದಲ್ಲಿ ಪದವಿ ಹಾಗೂ ಪಿಯುಸಿ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ತಾಂತ್ರಿಕೇತರ ಹಾಗೂ ತಾಂತ್ರಿಕ ಒಟ್ಟು 4,744 ಹುದ್ದೆಗಳ ನೇಮಕಾತಿ ನಡೆಯಲಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ. ಇನ್ನೂ ಈ ನೇಮಕಾತಿಯ ಲಿಖಿತ ಪರೀಕ್ಷೆಗಳ ವೇಳಾಪಟ್ಟಿಯ ಬಿಗ್ ಅಪ್ಡೇಟ್ ಸಹ ಅವರು ನೀಡಿದ್ದಾರೆ. ವಿವಿಧ ಇಲಾಖೆಗಳ ಹುದ್ದೆಗಳು, ಪ್ರಸ್ತುತ ತಾಂತ್ರಿಕೇತರ ಹಾಗೂ ತಾಂತ್ರಿಕ ಹುದ್ದೆಗಳಿಗೆ ಸೆಪ್ಟಂಬರ್ ನಲ್ಲಿ ಅಧಿಸೂಚನೆ ಹೊರಡಿಸಲಾಗುವುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಲಿಖಿತ ಪರೀಕ್ಷೆ ಕೂಡ ನಡೆಸಲು ಸಿದ್ಧತೆ ನಡೆದಿದೆ ಎಂದು ಅವರು ತಿಳಿಸಿದರು. ಯಾವ ಇಲಾಖೆಯ ಯಾವ ಹುದ್ದೆಗೆಳಿಗೆ ಅರ್ಜಿ ಸಲ್ಲಿಸಬಹುದು ಎಂಬುದರ ವಿವರಗಳು ಇರುವ ಈ ಲಿಂಕ್ ಮುಂದೆ ನೀಡಲಾಗಿದೆ. ಅರ್ಹರು ಪಠ್ಯಕ್ರಮದ ಮಾಹಿತಿ ಸಹ ಲಿಂಕ್‌ನಲ್ಲಿ ಪಡೆದುಕೊಂಡು ಅಧ್ಯಯನ ಆರಂಭಿಸಬಹುದು ಎಂದರು. Also Read UGCET 2026: ಮೂರನೇ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಸ್ ಲಿಂಕ್ ಓಪನ್; ಕೊನೆಯ ದಿನಾಂಕ ಯಾವಾಗ? KEA Recruitment 2026: ಪದವಿ ಮಟ್ಟದ ತಾಂತ್ರಿಕೇತರ ಹುದ್ದೆಗಳು 2,421 ಹಾಗೂ ಪಿಯುಸಿ ಮಟ್ಟದ ತಾಂತ್ರಿಕೇತರ ಹುದ್ದೆಗಳು 2,062 ಇವೆ. ತಾಂತ್ರಿಕ ಹುದ್ದೆಗಳು 261 ಇದ್ದು, ನಂತರದ ದಿನಗಳಲ್ಲಿ ಇನ್ನೂ ಹೊಸ ಇಲಾಖೆ ಮತ್ತು ಹುದ್ದೆಗಳು ಸೇರುವ ಸಾಧ್ಯತೆ ಇದೆ. ಪೂರ್ಣ ವಿವರಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗುತ್ತದೆ. * ಸಮಾಜ ಕಲ್ಯಾಣ ಇಲಾಖೆ: 319 ವಾರ್ಡನ್ (ಪುರುಷ) ಹುದ್ದೆಗಳಿವೆ. ಉಳಿಕೆ ಮೂಲ ವೃಂದದ 294 ಮತ್ತು ಕಲ್ಯಾಣ ಕರ್ನಾಟಕದ 25 ಹುದ್ದೆ ಇವೆ. * ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: ನಿಲಯ ಮೇಲ್ವಿಚಾರಕರ ಒಟ್ಟು 386 ಹುದ್ದೆ. ಪುರುಷರ ವಿಭಾಗದಲ್ಲಿ 274 (180 ಉಳಿಕೆ ಮೂಲ + 94 ಕಲ್ಯಾಣ ಕರ್ನಾಟಕ) ಹಾಗೂ ಮಹಿಳೆಯರ ವಿಭಾಗದಲ್ಲಿ 112 (100 ಉಳಿಕೆ ಮೂಲ + 12 ಕಲ್ಯಾಣ ಕರ್ನಾಟಕ) ಹುದ್ದೆ ಇವೆ. Recommended For You Karnataka Public Schools: ಮುಂದಿನ ವರ್ಷ ಕೆಪಿಎಸ್ ಕ್ರಾಂತಿ! ಸರ್ಕಾರಿ ಶಾಲೆಗಳಿಗೆ ಸಿಗಲಿದೆ ಬೂಸ್ಟ್ * ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ: ಒಟ್ಟು 184 ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್-1) ಹುದ್ದೆಗಳಿದ್ದು, ಅದರಲ್ಲಿ 135 ಉಳಿಕೆ ಮೂಲ ವೃಂದ ಹಾಗೂ 49 ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಾಗಿವೆ. * ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ: ಒಟ್ಟು 358 ಹುದ್ದೆ ಭರ್ತಿಯಾಗಲಿದ್ದು, ಅದರಲ್ಲಿ 148 ಪ್ರಥಮ ದರ್ಜೆ ಸಹಾಯಕರ ಹುದ್ದೆಗಳು (100 ಉಳಿಕೆ ಮೂಲ + 48 ಕಲ್ಯಾಣ ಕರ್ನಾಟಕ), 104 ಪ್ರಥಮ ದರ್ಜೆ ಸಹಾಯಕ ಕಂ ಕಂಪ್ಯೂಟರ್ ಆಪರೇಟರ್ ಹುದ್ದೆಗಳು (79 ಉಳಿಕೆ ಮೂಲ + 25 ಕಲ್ಯಾಣ ಕರ್ನಾಟಕ) ಹಾಗೂ 106 ನಿಲಯ ಪಾಲಕರ ಹುದ್ದೆಗಳು (78 ಉಳಿಕೆ ಮೂಲ + 28 ಕಲ್ಯಾಣ ಕರ್ನಾಟಕ) ಇವೆ. * ವಾಣಿಜ್ಯ ತೆರಿಗೆಗಳ ಇಲಾಖೆ: ಒಟ್ಟು 66 ಪ್ರಥಮ ದರ್ಜೆ ಸಹಾಯಕ ಹುದ್ದೆಗಳು (56 ಉಳಿಕೆ ಮೂಲ + 10 ಕಲ್ಯಾಣ ಕರ್ನಾಟಕ) ಹಾಗೂ 50 ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಗಳು (48 ಉಳಿಕೆ ಮೂಲ + 02 ಕಲ್ಯಾಣ ಕರ್ನಾಟಕ) ಇವೆ. * ರಾಜ್ಯ ಖಜಾನೆ ಇಲಾಖೆ: 61 ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿವೆ (50 ಉಳಿಕೆ ಮೂಲ + 11 ಕಲ್ಯಾಣ ಕರ್ನಾಟಕ), * ಅರಣ್ಯ ಇಲಾಖೆ: 62 ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿವೆ (36 ಉಳಿಕೆ ಮೂಲ + 26 ಕಲ್ಯಾಣ ಕರ್ನಾಟಕ). * ಕರ್ನಾಟಕ ಸರ್ಕಾರ ಸಚಿವಾಲ: ಒಟ್ಟು 42 ಸಹಾಯಕ ಹುದ್ದೆಗಳನ್ನು (32 ಉಳಿಕೆ ಮೂಲ + 10 ಕಲ್ಯಾಣ ಕರ್ನಾಟಕ) ಭರ್ತಿ ಮಾಡಲಾಗುತ್ತಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ.














Comments