200 ಕೋಟಿಗೂ ಅಧಿಕ ಮೌಲ್ಯದ ಸಿಎ ನಿವೇಶನಗಳ ಸಂರಕ್ಷಣೆಗೆ ಕ್ರಮ
ಬೇಸ್ಮೆಂಟ್ ಅನ್ನು ಅನಧಿಕೃತವಾಗಿ ವಾಣಿಜ್ಯ ಬಳಕೆಗೆ ಉಪಯೋಗಿಸುತ್ತಿರುವ 'ವ್ಯಾಗಲ್ ಅಪ್' ಅಂಗಡಿ ಸೇರಿದಂತೆ ಇತರ ಅಂಗಡಿಗಳಿಗೆ ನೋಟಿಸ್ ನೀಡಿ ಬಂದ್ ಮಾಡುವಂತೆ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ತಿಳಿಸಿದರು.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ್ ರೆಡ್ಡಿ ರವರೊಂದಿಗೆ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಹಾಗೂ ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್ ರವರು ಇಂದು ಮುಂಜಾನೆ ಎಚ್ಎಸ್ಆರ್ ಲೇಔಟ್ನ ಟ್ವಿನ್ ಪಾರ್ಕ್ನಲ್ಲಿ ಹಾಗೂ ಅರಕೆರೆ ಉದ್ಯಾನವನದಲ್ಲಿ ಸ್ಥಳೀಯ ನಿವಾಸಿಗಳ ಕುಂದುಕೊರತೆಗಳನ್ನು ಖುದ್ದಾಗಿ ಆಲಿಸಿದರು.
ಮಳೆಗಾಲದಲ್ಲಿ ಸರ್ವಿಸ್ ರಸ್ತೆಯ ಪಕ್ಕದಲ್ಲಿರುವ ಕಾಲುವೆಗಳಲ್ಲಿ ನೀರು ಉಕ್ಕಿ ಮನೆಗಳಿಗೆ ನುಗ್ಗದಂತೆ ತಡೆಯಲು ಸರ್ವಿಸ್ ರಸ್ತೆಯಲ್ಲಿ ಪ್ರತ್ಯೇಕ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಆಯುಕ್ತರಲ್ಲಿ ಮನವಿ ಮಾಡಿದರು.
ಅಲ್ಲದೆ, ಮಳೆ ನೀರುಗಾಲುವೆಗಳಲ್ಲಿ ಸಿಲುಕಿರುವ ಹೂಳು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಲು ಸಕ್ಷನ್ ಪಂಪ್ ಹಾಗೂ ರೋಬೋಟಿಕ್ ಯಂತ್ರೋಪಕರಣಗಳನ್ನು ಬಳಸಿಕೊಂಡು ತ್ವರಿತವಾಗಿ ಡಿಸಿಲ್ಟಿಂಗ್ ಕಾಮಗಾರಿ ನಡೆಸಲು ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದರು.
GBA: ಕೆರೆ ಸಂರಕ್ಷಣೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ
ಸೋಮಸುಂದರಪಾಳ್ಯ ಕೆರೆ ಸೇರಿದಂತೆ ಬೊಮ್ಮನಹಳ್ಳಿ ವ್ಯಾಪ್ತಿಯ ಕೆರೆಗಳಿಗೆ ತಂತಿ ಬೇಲಿ ಅಳವಡಿಸಲು ಹಾಗೂ ಕೆರೆ ಅಭಿವೃದ್ಧಿಗೆ ತಕ್ಷಣವೇ ಟೆಂಡರ್ ಕರೆಯುವಂತೆ ತಿಳಿಸಿದರು. ಬನ್ನೇರುಘಟ್ಟ ರಸ್ತೆಯ ಜೆ.ಡಿ.ಮರದಿಂದ ಐಐಎಂಬಿ ವರೆಗಿನ ರಸ್ತೆಯ ವೈಟ್ ಟಾಪಿಂಗ್ ಹಾಗೂ ದುರಸ್ತಿ ಕಾಮಗಾರಿಯನ್ನು ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗದಂತೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಮತ್ತು ಸಿಂಗಸಂದ್ರ ಹಾಗೂ ಎಇಸಿಎಸ್ ಲೇಔಟ್ನ ಪಾಲಿಕೆಯ ವಲಯ ಸರಹದ್ದಿಗೆ ಸಂಬಂಧಿಸಿದ ಗೊಂದಲಗಳನ್ನು ಶೀಘ್ರ ಪರಿಹರಿಸಲು ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದರು.
Brand logo
ಘನತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛತಾ ಸುಧಾರಣೆ
ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬಿಳೇಕಹಳ್ಳಿ ಸೇರಿದಂತೆ ಒಟ್ಟು 8 ವಾರ್ಡ್ಗಳಲ್ಲಿ ಕಸ ಸಂಗ್ರಹಣಾ ಆಟೋಗಳಿಗೆ ಜಿಪಿಎಸ್ ಅಳವಡಿಕೆ ಹಾಗೂ ಸೆಕೆಂಡರಿ ಟ್ರಾನ್ಸ್ಫರ್ ಪಾಯಿಂಟ್ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಮುಖ್ಯ ಆಯುಕ್ತರು ತಿಳಿಸಿದರು. ಈ ಮಧ್ಯೆ ಶಾಸಕರು ಪೌರಕಾರ್ಮಿಕರ ನಿವೃತ್ತಿಯಿಂದ ಹಾಗೂ ಮೃತಪಟ್ಟಿರುವವರಿಂದ ತೆರವಾಗಿರುವ ಹುದ್ದೆಗಳ ಭರ್ತಿ ಮಾಡುವಂತೆ ಮುಖ್ಯ ಆಯುಕ್ತರನ್ನು ಕೋರಿದರು.
Attendance ಕಡ್ಡಾಯ: ಕೃಷ್ಣ ಬೈರೇಗೌಡ ಮಹತ್ವದ ಸೂಚನೆ
ಮುಂದುವರೆದು ಸ್ವಚ್ಛತಾ ಕಾರ್ಯದ ನಿರಂತರ ಮೇಲ್ವಿಚಾರಣೆ ಹಾಗೂ ವಾಣಿಜ್ಯ ಸಂಸ್ಥೆಗಳು ರಸ್ತೆ ಬದಿಯಲ್ಲಿ ಕಸ ಬಿಸಾಡದೆ ತಮ್ಮ ಕಾಂಪೌಂಡ್ ಒಳಗೆ ಡಸ್ಟ್ಬಿನ್ ಇಟ್ಟು ಕಸದ ವಾಹನಗಳಿಗೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಾದಚಾರಿ ಮಾರ್ಗಗಳ ಒತ್ತುವರಿ ತೆರವು
ಪರಿಶೀಲನೆ ವೇಳೆ ಎಚ್.ಎಸ್.ಆರ್ ಲೇಔಟ್ ನ 19ನೇ ಮೇನ್ ನ ಜೈ ಶ್ರೀರಾಮ್ ವೃತ್ತ ಹಾಗೂ 17 ಮತ್ತು 27ನೇ ಕ್ರಾಸ್ಗಳಲ್ಲಿ ಪಾದಚಾರಿ ಮಾರ್ಗವನ್ನು ಪರಿಶೀಲಿಸಲಾಯಿತು. ಯುಜಿಸಿ ಕೇಬಲ್ ಅಳವಡಿಕೆಗೆ ಪಾದಚಾರಿ ಮಾರ್ಗ ಅಗೆದು ಹಾಗೆಯೇ ಬಿಟ್ಟು ಹೋಗಿರುವ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಿ, ಒಂದು ವೇಳೆ ಸರಿಪಡಿಸದಿದ್ದರೆ ಪಾಲಿಕೆಯಿಂದಲೇ ದುರಸ್ತಿಪಡಿಸಿ ಅದರ ದುಪ್ಪಟ್ಟು ವೆಚ್ಚವನ್ನು ಗುತ್ತಿಗೆದಾರರಿಂದಲೇ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸುಗಮ ಸಂಚಾರ ಮತ್ತು ಪಾರ್ಕ್ ನಿರ್ವಹಣೆಗೆ ಎಚ್ಚರಿಕೆ
ಪುಟ್ ಪಾತ್ ಮೇಲೆ ಓಡಾಡಲು ಸಾರ್ವಜನಿಕರಿಗೆ ಅಡ್ಡಿಯಾಗಿರುವ ಮರಗಳ ರೆಂಬೆಗಳನ್ನು ಟ್ರಿಮ್ ಮಾಡುವುದು ಹಾಗೂ ಸ್ವಾಭಿಮಾನ ಪಾರ್ಕ್ನಲ್ಲಿ ಅನಧಿಕೃತವಾಗಿ ಹಾಕಲಾಗಿರುವ ಕಟ್ಟೆಗಳನ್ನು ತೆರವುಗೊಳಿಸಲು ಸೂಚಿಸಲಾಯಿತು. ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡುವವರ ವಿರುದ್ಧ ಟ್ರಾಫಿಕ್ ಪೊಲೀಸರ ನೆರವಿನಿಂದ ಟೋಯಿಂಗ್ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲು ಹಾಗೂ ಅಗತ್ಯ ಸ್ಥಳಗಳಲ್ಲಿ ಸಿಗ್ನಲ್ ಮತ್ತು ರಸ್ತೆ ವಿಭಜಕ (ಮೀಡಿಯನ್) ಕಾಮಗಾರಿಗಳನ್ನು ತಕ್ಷಣವೇ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ತಿಳಿಸಿದರು.
ಅರಕೆರೆ ವಾರ್ಡ್ನಲ್ಲಿ 200 ಕೋಟಿಗೂ ಅಧಿಕ ಮೌಲ್ಯದ ಸಿಎ ನಿವೇಶನಗಳ ಸಂರಕ್ಷಣೆಗೆ ಕ್ರಮ
ಶಾಸಕರಾದ ಶ್ರೀ ಸತೀಶ್ ರೆಡ್ಡಿ ಹಾಗೂ ಪಾಲಿಕೆಯ ಆಯುಕ್ತರಾದ ಶ್ರೀ ಕೆ. ಎನ್. ರಮೇಶ್ ರವರು ತಪಾಸಣೆ ಕಾರ್ಯವನ್ನು ಮುಂದುವರೆಸಿ, ಅರಕೆರೆ ವಾರ್ಡ್ ವ್ಯಾಪ್ತಿಯಲ್ಲಿರುವ ಸುಮಾರು 200 ಕೋಟಿಗೂ ಅಧಿಕ ಮೌಲ್ಯದ ಸಿಎ ನಿವೇಶನಗಳು ಅಕ್ರಮವಾಗಿ ಒತ್ತುವರಿಯಾಗುತ್ತಿರುವುದನ್ನು ತಡೆಯಲು ತಂತಿ ಬೇಲಿ ಅಳವಡಿಸಬೇಕೆಂದು ಸಾರ್ವಜನಿಕರು ಆಯುಕ್ತರಲ್ಲಿ ಮನವಿ ಮಾಡಿದರು.
ಶಾಸಕರಾದ ಎಂ. ಸತೀಶ್ ರೆಡ್ಡಿ ಅವರು ಮಾತನಾಡಿ, ಬಿಡಿಎ ಲೇಔಟ್ಗಳಲ್ಲಿರುವ ಸಿಎ ನಿವೇಶನಗಳು ಮತ್ತು ಬಿಟಿಎಂ 5ನೇ ಹಂತದ ಬಿಎಂಟಿಸಿ ಬಸ್ ನಿಲ್ದಾಣದ ಜಾಗಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದ್ದು, ಇವುಗಳನ್ನು ತಕ್ಷಣವೇ ತೆರವುಗೊಳಿಸಿ, ಇದರೊಂದಿಗೆ ಭಗವತಿ ಲೇಔಟ್ನಲ್ಲಿ ಮನೆ-ಸಂಪ್ಗಳಿಗೆ ಹಾನಿಯುಂಟುಮಾಡುತ್ತಿರುವ ಬೃಹತ್ ಮರಗಳನ್ನು ತೆರವುಗೊಳಿಸುವುದು ಹಾಗೂ ಬಿಡಿಎ ಪಾರ್ಕ್ಗಳ ಸಮಗ್ರ ಅಭಿವೃದ್ಧಿ ಮಾಡುವಂತೆ ಆಯುಕ್ತರಲ್ಲಿ ಮನವಿ ಮಾಡಿದರು.
ಸರ್ವೇ ನಡೆಸಿ ಸಿಎ ಸೈಟ್ ಗಳ ಗಡಿ ಗುರುತಿಸಿ
ಅರಕೆರೆಯಲ್ಲಿ ಬಿಡಿಎ ಮತ್ತು ಪಾಲಿಕೆ ಎಂಜಿನಿಯರ್ಗಳು ಜಂಟಿಯಾಗಿ ಸರ್ವೇ ನಡೆಸಿ ಪ್ರತಿಯೊಂದು ಸಿಎ ಸೈಟ್ ಮತ್ತು ಪಾರ್ಕ್ಗಳನ್ನು ಗುರುತಿಸಿ, ಅನಧಿಕೃತ ಒತ್ತುವರಿಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿ ತಂತಿ ಬೇಲಿ ಅಳವಡಿಸುವಂತೆ ತಿಳಿಸಿದರು. ಅಲ್ಲದೆ, ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸುವುದು ಮತ್ತು ವಾಣಿಜ್ಯ ಸಂಕೀರ್ಣಗಳ ಬೇಸ್ಮೆಂಟ್ಗಳನ್ನು ಕೇವಲ ವಾಹನ ನಿಲುಗಡೆಗೆ ಮಾತ್ರ ಬಳಸುವುದಾಗಿದ್ದರೂ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿರುವವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳುವಂತೆ ತಿಳಿಸಿದರು.
5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಒಳಾಂಗಣ ಕ್ರೀಡಾಂಗಣವು ಸರಿಯಾದ ನಿರ್ವಹಣೆಯಿಲ್ಲದೆ ದುಷ್ಕರ್ಮಿಗಳ ತಾಣವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ತಕ್ಷಣವೇ ಅದನ್ನು ದುರಸ್ತಿಪಡಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಜೊತೆಗೆ ಅರಕೆರೆ ಮತ್ತು ಹುಳಿಮಾವು ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್














Comments