ಬೆಂಗಳೂರಿನಲ್ಲಿ ತಂಪು ವಾತಾವರಣ: ಅಲ್ಲಲ್ಲಿ ಹಗುರ ಮಳೆ ನಿರೀಕ್ಷೆ
ಕರ್ನಾಟಕ ಮಾತ್ರವಲ್ಲದೇ ನೆರೆಯ ರಾಜ್ಯಗಳ ಕರಾವಳಿ ಸಮೀಪ ಸಮುದ್ರಮಟ್ಟದಲ್ಲಿ ಬದಲಾವಣೆ ಆಗಿವೆ. ವೈಪರೀತ್ಯಗಳ ತೀವ್ರತೆಯಿಂದ ಮತ್ತೆ ಮುಂಗಾರು ಚುರುಕಾಗುವ, ಸಾಧಾರಣದಿಂದ ಭಾರೀ ಮಳೆ ಸುರಿಯುವ ನಿರೀಕ್ಷೆಗಳು ಇವೆ. ಸದ್ಯ ಮುಂದಿನ ಕೆಲವು ದಿನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಿರಂತರವಾಗಿ ಬಿರುಗಾಳಿ ಸಹಿತ ಸುರಿದಿದ್ದ ಮುಂಗಾರು ಮಳೆ ಇದೀಗ ಬಹುತೇಕ ಕಡೆಗಳಲ್ಲಿ ದುರ್ಬಲವಾಗಿದೆ. ಕರಾವಳಿ, ಮಲೆನಾಡು ಆಗಾಗ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ಅಬ್ಬರಿಸಿತ್ತು. ಮುಂದಿನ 5ದಿನ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕರ್ನಾಟಕದಲ್ಲಿ ಮಳೆಗಾಲ ಮಾಯವಾಯ್ತಾ? ಅದೇ ರೀತಿ ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ವಿಜಯಪುರ ಜಿಲ್ಲೆ ಒಳಗೊಂಡಂತೆ ಉತ್ತರ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ದಿನ ಬಿಟ್ಟು ದಿನ ಗಂಟೆಗೆ 30-40 ಕಿ.ಮೀ ವೇಗದ ನಿರಂತರ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಹಲವೆಡೆ ಬಿಸಿಲಿನ ಚುರುಕು ಹೆಚ್ಚಿದ್ದು, ಮಳೆಗಾಲ ಮಾಯವಾಯ್ತಾ? ಎಂಬಂತಹ ಅನುಭವವಾಗುತ್ತಿದೆ. Also Read Karnataka 14 Reservoirs: ರಾಜ್ಯದ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ 135 ಟಿಎಂಸಿ ಕಡಿಮೆ ನೀರು Karnataka Weather: ವಿವಿಧ ಜಿಲ್ಲೆಗಳಲ್ಲಿ ಮಳೆ ಇನ್ನೂ ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ನಿರಂತರ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆ ಆಗಲಿದ್ದು, ಭಾರೀ ಮಳೆ ಸದ್ಯಕ್ಕೆ ಇಲ್ಲ ಎನ್ನಲಾಗಿದೆ. ಇದರೊಂದಿಗೆ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಹಾಸನ ತುಮಕೂರು, ವಿಜಯನಗರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗಂಟೆಗೆ ಗರಿಷ್ಠ 40 ಕಿ.ಮೀ ವೇಗದ ಗಾಳಿ ಅಲ್ಲಲ್ಲಿ ವ್ಯಾಪಕ ಮಳೆಯ ಲಕ್ಷಣಗಳು ಇವೆ ಎಂದು ಹವಾಮಾನ ಇಲಾಖೆ ವಿಜ್ಞಾನಿಗಳು ಮುನ್ಸೂಚನೆ ಕೊಟ್ಟಿದ್ದಾರೆ. ಹವಾಮಾನ ವೈಪರೀತ್ಯಗಳ ಅಪ್ಡೇಟ್ ಪಶ್ಚಿಮ ಬಂಗಾಳದ ಗಂಗಾನದಿಯ ಮೇಲೆ ಮತ್ತು ಒಡಿಶಾದ ಉತ್ತರ ಕರಾವಳಿ ಮತ್ತು ಬಂಗಾಳಕೊಲ್ಲಿಯ ವಾಯುವ್ಯ ಭಾಗಗಳಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಸೆಪ್ಟೆಂಬರ್ 01 ರಂದು ಗಂಗಾನದಿಯ ಪಶ್ಚಿಮ ಬಂಗಾಳ ಮತ್ತು ಒಡಿಶಾದ ಉತ್ತರ ಕರಾವಳಿ, ಜಾರ್ಖಂಡ್ ಮತ್ತು ಬಂಗಾಳಕೊಲ್ಲಿಯ ವಾಯುವ್ಯ ಭಾಗಗಳ ಮೇಲೆ ಕೇಂದ್ರೀಕೃತಗೊಂಡಿದೆ. ಅದರ ಸುಳಿಗಾಳಿಯು ಸಮುದ್ರ ಮಟ್ಟದಿಂದ 7.6ಕಿ.ಮೀ ವರೆಗೆ ವಿಸ್ತರಿಸಿದೆ. ಈ ವೈಪರೀತ್ಯವು ಮುಂದಿನ 48 ಗಂಟೆಗಳಲ್ಲಿ ಉತ್ತರ ಒಡಿಶಾ ಮತ್ತು ಜಾರ್ಖಂಡ್‌ನಾದ್ಯಂತ ಪಶ್ಚಿಮ-ವಾಯುವ್ಯಕ್ಕೆ ಚಲಿಸಲಿದೆ. Recommended For You Karnataka Public Schools: ಮುಂದಿನ ವರ್ಷ ಕೆಪಿಎಸ್ ಕ್ರಾಂತಿ! ಸರ್ಕಾರಿ ಶಾಲೆಗಳಿಗೆ ಸಿಗಲಿದೆ ಬೂಸ್ಟ್ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣ ಸಮುದ್ರ ಮಟ್ಟದಲ್ಲಿನ ಮಾನ್ಸೂನ್ ಟ್ರಫ್ ಜಮ್ಮು, ಚಂಡೀಗಢ, ಶಹಜಹಾನ್‌ಪುರ, ವಾರಣಾಸಿ ಮೂಲಕ ಹಾದುಹೋಗುತ್ತದೆ, ಗಂಗಾನದಿಯ ಪಶ್ಚಿಮ ಬಂಗಾಳ ಮತ್ತು ಒಡಿಶಾದ ಉತ್ತರ ಕರಾವಳಿ, ಜಾರ್ಖಂಡ್ ಮತ್ತು ಬಂಗಾಳಕೊಲ್ಲಿಯ ವಾಯುವ್ಯ ಭಾಗಗಳ ಪಕ್ಕದ ಪ್ರದೇಶಗಳ ಮೇಲಿದೆ. ಟ್ರಫ್‌ನಿಂದ ಇದು ಕಡಿಮೆ ಒತ್ತಡದ ಪ್ರದೇಶದ ಕೇಂದ್ರವಾಗಿ ಬದಲಾಗಿದೆ. ಇವುಗಳ ಪರಿಣಾಮವು ಕರ್ನಾಟಕದ ಮೇಲಾಗುತ್ತಿದ್ದು, ವಿವಿಧೆಡೆ ಕಡೆಗಳಲ್ಲಿ ಮಳೆ, ತಂಪು ವಾತಾವರಣ ನಿರ್ಮಾಣವಾಗಿದೆ. ಬೆಂಗಳೂರು ಹವಾಮಾನ ಮುನ್ಸೂಚನೆ ನಗರದಲ್ಲಿ ತಂಪು ವಾತಾವರಣ ಮುಂದುವರಿದಿದ್ದು, ಅಲ್ಲಲ್ಲಿ ಹಗರು ಮಳೆ ನಿರೀಕ್ಷೆ ಇದೆ. ಉಳಿದಂತೆ ಮಬ್ಬು ಕವಿದ ಆಕಾಶ ಇರಲಿದ್ದು, ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ತಾಪಮಾನ, ಕನಿಷ್ಠ 20-21 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರಲಿದೆ ಎಂದು ಹವಾಮಾನ ಕೇಂದ್ರದ ವರದಿ ತಿಳಿಸಿದೆ.














Comments