• Sep 11, 2026
  • NPN Log
    ಕಾಂಗ್ರೆಸ್ ವಿರುದ್ಧ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಇದು 'ಪಾದಯಾತ್ರೆಯಲ್ಲ ಪಶ್ಚಾತಾಪ ಯಾತ್ರೆ' ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ತಿಳಿಸಿದ್ದಾರೆ. ಕಲಾಪವನ್ನು ನಡೆಸಲು ಬಿಡದೇ ಬಿಜೆಪಿ-ಜೆಡಿಎಸ್ ನಾಯಕರು ಅಡ್ಡಿ ಮಾಡಿದ್ದರೆಂದು ಈ ಹಿಂದೆಯು ಗುಡುಗಿದ್ದ ತಂಗಡಗಿ ಇದೀಗ ಮತ್ತೆ ಎರಡು ವಿಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವೈಫಲ್ಯ ಹಾಗೂ ವಾಲ್ಮೀಕಿ ನಿಗಮ ಹಗರಣದ ಆರೋಪಿಯಾಗಿರುವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ದೋಸ್ತಿ ನಾಯಕರು ಸೆಪ್ಟಂಬರ್ 1ರಿಂದ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ರಾಯಚೂರಿನಿಂದ ಬಳ್ಳಾರಿವರೆಗೆ ವಿವಿಧ ಮಾರ್ಗಗಳ ಮೂಲಕ ಈ ಪಾದಯಾತ್ರೆ ಜರುಗಲಿದೆ. ಜನರ ಶಾಪಕ್ಕೆ ಗುರಿಯಾಗಿ ಪಾದಯಾತ್ರೆ ಪಾದಯಾತ್ರೆಗೆ ಕುರಿತು ಪ್ರತಿಕ್ರಿಯಿಸಿರುವ ಸಚಿವ ಶಿವರಾಜ ತಂಗಡಗಿ ಅವರು, ಬಿಜೆಪಿ-ಜೆಡಿಎಸ್ ಸಚಿವ ನಾಗೇಂದ್ರ ಹೆಸರಿನಲ್ಲಿ ಕೈಗೊಳ್ಳುತ್ತಿರುವುದು ಪಾದಯಾತ್ರೆ ಅಲ್ಲ, ಅಧಿವೇಶನದಲ್ಲಿ ಜನರ ಸಮಸ್ಯೆ ಚರ್ಚೆಯಾಗದಂತೆ ಹಾಳು ಮಾಡಿ ಜನರ ಶಾಪಕ್ಕೆ ಗುರಿಯಾಗಿರುವ ನಡೆಸುತ್ತಿರುವ ಪಶ್ಚಾತಾಪ ಯಾತ್ರೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಶತಮಾನದಲ್ಲೇ ವರದಿಯಾಗದಂತಹ ಬರ ಈ ವರ್ಷ ಎದುರಾಗಿದೆ. ಹೀಗಿರುವಾಗ ಜನರ ಪರ ಕೇಂದ್ರದಿಂದ ಪರಿಹಾರಕ್ಕೆ ಒತ್ತಾಯಿಸುವ ಬದಲು ಪ್ರತಿಪಕ್ಷಗಳ ನಾಯಕರು ರಾಜಕೀಯದಲ್ಲಿ ನಿರತರಾಗಿದ್ದಾರೆ ಎಂದು ಅವರು ವಿಪಕ್ಷಗಳ ನಡೆ ಟೀಕಿಸಿದರು.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion